ಬೈಪಾಡಿ :(ಜು.21) ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಹರೀಶ್ ಪೂಂಜರವರು ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ರೂ 5.00 ಲಕ್ಷ ಅನುದಾನದಲ್ಲಿ ಬಂದಾರು ಗ್ರಾಮ ಬೈಪಾಡಿ ಸರ್ಕಲ್ ಬಳಿ ಜುಲೈ 21 ರಂದು ರಿಕ್ಷಾ ತಂಗುದಾಣವನ್ನು ಶಾಸಕರಾದ ಹರೀಶ್ ಪೂಂಜರವರು ಲೋಕಾರ್ಪಣೆಗೊಳಿಸಿದರು.

ಇದನ್ನೂ ಓದಿ: ⭕ಸ್ನೇಹಿತೆಯ ಪತಿಯನ್ನೇ ಪಟಾಯಿಸಿ ಮದುವೆಯಾದ ‘ಬಿಂದಾಸ್’ ನಟಿ ಹನ್ಸಿಕಾ ಮೋಟ್ವಾನಿ
ಈ ಸಂದರ್ಭದಲ್ಲಿ ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿನೇಶ್ ಗೌಡ ಖಂಡಿಗ, ಪದ್ಮುಂಜ ಸಿ ಎ ಬ್ಯಾಂಕ್ ಅಧ್ಯಕ್ಷರಾದ ರಕ್ಷಿತ್ ಪಣೆಕ್ಕರ, ಪೆರ್ಲ -ಬೈಪಾಡಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ಉಮೇಶ್ ಗೌಡ ಅಂಗಡಿಮಜಲು, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಮಹಾಬಲ ಗೌಡ, ಪೆರ್ಲ -ಬೈಪಾಡಿ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷರಾದ ಡೀಕಯ್ಯ ಗೌಡ,
ಕಾರ್ಯದರ್ಶಿ ಲೋಹಿತ್ ಗೌಡ, ಬೆಳ್ತಂಗಡಿ ಮಂಡಲ ಬಿಜೆಪಿ ಯುವಮೋರ್ಚಾ ಕಾರ್ಯದರ್ಶಿ ಗಿರೀಶ್ ಗೌಡ ಬಿ.ಕೆ, ಕಣಿಯೂರು ಮಹಾಶಕ್ತಿ ಕೇಂದ್ರ ಯುವಮೋರ್ಚಾ ಸಹಸಂಚಾಲಕರಾದ ಲೋಕ್ಷತ್ ಗೌಡ,ಕಣಿಯೂರು ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಮಹೇಶ್ ಜೇಂಕ್ಯಾರ್, ಪ್ರಮುಖರಾದ ಹೊನ್ನಪ್ಪ ಗೌಡ,ಲಿಂಗಪ್ಪ ಗೌಡ, ಆನಂದ ಗೌಡ, ಆಟೋ ಚಾಲಕ-ಮಾಲಕ ವೃಂದ,ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.



