ಮಂಗಳೂರು:(ಜು.22) ಶಕ್ತಿನಗರದ ರಾಜೀವ ನಗರದಲ್ಲಿ ವಾಸವಾಗಿದ್ದ ತಾಯಿ, ಮಗು ನಾಪತ್ತೆಯಾದ ಘಟನೆ ನಡೆದಿದೆ.
ನಾಪತ್ತೆಯಾದವರು ಲಾವಣ್ಯಾ (24) ಮತ್ತು ಅವರ ಪುತ್ರ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ⭕ಮಂಗಳೂರು : ಯುವ ಉದ್ಯಮಿ ನಿತಿನ್ ಸುವರ್ಣ ಆತ್ಮಹತ್ಯೆಗೆ ಶರಣು
ಅವರು ಜು. 19ರಂದು ನಾಪತ್ತೆಯಾಗಿದ್ದಾರೆ ಎಂದು ಪತಿ ಶಿವಮೊಗ್ಗ ಜಿಲ್ಲೆಯ ಹಾಗರದ ಹಳ್ಳಿ ನಿವಾಸಿ ಸೋಮಶೇಖರ್ ಅವರು ಕಂಕನಾಡಿ ನಗರ ಠಾಣೆಗೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಜು. 19ರಂದು ಕೆಲಸ ಮುಗಿಸಿ ರಾತ್ರಿ 8.30ರ ವೇಳೆಗೆ ಮನೆಗೆ ಬಂದು ನೋಡಿದಾಗ ಪತ್ನಿ ಮತ್ತು ಮಗ ಮನೆಯಲ್ಲಿ ಇರಲಿಲ್ಲ. ಅಕ್ಕಪಕ್ಕದ ಮನೆಯವರಲ್ಲಿ ವಿಚಾರಿಸಿದಾಗ ಮಧ್ಯಾಹ್ನ 2 ಗಂಟೆಗೆ ಮನೆಯಿಂದ ಹೋಗಿರುವುದಾಗಿ ತಿಳಿಸಿದ್ದಾರೆ. ಊರಿನಲ್ಲಿ ಸಂಬಂಧಿಕರಲ್ಲಿ ವಿಚಾರಿಸಿದರೂ ಈವರೆಗೆ ಪತ್ತೆಯಾಗಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.


