ಬೆಳಾಲು :(ಜು.23) ಬೆಳಾಲು ಗ್ರಾಮ ಅನಂತೋಡಿ ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಆಟಿ ಅಮಾವಾಸ್ಯೆ ಪ್ರಯುಕ್ತ ನಾಳೆ ಜುಲೈ 24 ಗುರುವಾರ ಬೆಳಗ್ಗೆ 7.30 ರಿಂದ 9.00 ರ ತನಕ ಮತ್ತು ಮಧ್ಯಾಹ್ನ 12.30ರ ನಂತರ ತೀರ್ಥಸ್ನಾನ, ಬೆಳಗ್ಗೆ ಹಾಗೂ ಮಧ್ಯಾಹ್ನ ಮಹಾ ಪೂಜೆ ನಡೆಯಲಿದೆ.

ಇದನ್ನೂ ಓದಿ: 🔴ಬೆಳ್ತಂಗಡಿ: ಪಂಚ ಗ್ಯಾರಂಟಿ ಯೋಜನೆಯ ತಾಲೂಕು ಮಟ್ಟದ ಅನುಷ್ಠಾನ ಸಮಿತಿ ಸಭೆ
ಭಕ್ತಾದಿಗಳು ಶ್ರೀ ಕ್ಷೇತ್ರಕ್ಕೆ ಆಗಮಿಸಿ ಶ್ರೀ ಅನಂತಪದ್ಮನಾಭ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಊರ ಪರವೂರ ಹತ್ತು ಸಮಸ್ತರ ಪರವಾಗಿ ಆಡಳಿತ ಮೊಕ್ತೇಸರರು, ಅಸ್ರಣ್ಣರು, ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ವ್ಯವಸ್ಥಾಪನಾ ಸಮಿತಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



