ಉಡುಪಿ: (ಜು.23) ದಿನಾಂಕ: 20/07/2025 ರಂದು 14:35 ಗಂಟೆಗೆ ಫಿರ್ಯಾದುದಾರರಾದ ಕುಶಲ ಹೆಚ್‌ರವರು ತಾವು ವಾಸಿಸುವ ಉಡುಪಿ ತಾಲೂಕು 76 ಬಡಗುಬೆಟ್ಟು ಗ್ರಾಮದ ಮಿಷನ್ ಕಾಂಪೌಂಡ್ ನ ಪಿಡ್ಬ್ಲೂಡಿ ಕ್ವಾಟ್ರೆಸ್ ನಲ್ಲಿ ಸೌರ್ಪಣಿಕ ಬಿ ಬ್ಲಾಕ್ ನಲ್ಲಿ ದಿನಾಂಕ 19/07/2025 ರ ಸಂಜೆ 6:00 ಗಂಟೆ ಯಿಂದ ದಿನಾಂಕ : 20/07/2025 ರಂದು ಬೆಳಿಗ್ಗೆ 7:00 ಗಂಟೆಯ ಮಧ್ಯದಲ್ಲಿ ಯಾರೋ ಕಳ್ಳರು ಮನೆಯ ದ್ವಾರ ಬಾಗಿಲಿನ ಚಿಲಕದ ಸ್ಕ್ರೂ ಗಳನ್ನು ತೆಗೆದು ಚಿಲಕವನ್ನು ಮೇಲೆತ್ತಿ ಮನೆಯ ಒಳಗೆ ಪ್ರವೇಶಿಸಿ ಬೆಡ್ ರೂಮಿನಲ್ಲಿದ್ದ ಹೊಲಿಗೆ ಯಂತ್ರದ ಮೇಲಿಟ್ಟಿದ್ದ ಕೀ ಯನ್ನು ತೆಗೆದು ಕಪಾಟ್ ನ ಬೀಗ ತೆಗೆದು ಅದರೊಳಗಿಟ್ಟಿದ್ದ 1)ಒಂದು ಜೊತೆ ಬೆಳ್ಳಿಯ ಕಾಲುಗೆಜ್ಜೆ-40 ಗ್ರಾಂ ಅಂದಾಜು ಮೌಲ್ಯ 3200/- 2)ಒಂದು ಜೊತೆ ಬೆಳ್ಳಿಯ ಕಾಲುಗೆಜ್ಜೆ-20 ಗ್ರಾಂ ಅಂದಾಜು ಮೌಲ್ಯ 1,600/- 3) ಒಂದು ಜೊತೆ ಬೆಳ್ಳಿಯ ಸೊಂಟದ ನೇವಳ-30 ಗ್ರಾಂ ಅಂದಾಜು ಮೌಲ್ಯ 5,600/- 4)ಒಂದು ಜೊತೆ ಬೆಳ್ಳಿಯ ಕೈಬಳೆ-20 ಗ್ರಾಂ ಅಂದಾಜು ಮೌಲ್ಯ 1,600/- ಒಟ್ಟಾರೆಯಾಗಿ 12,000/- ರೂಪಾಯಿ ಮೌಲ್ಯದಷ್ಟು ಬೆಳ್ಳಿ ಹಾಗೂ ನಗದು ಹಣ 1,700/- ರೂಪಾಯಿಯನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂಬುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ : 136/2025 U/S. 331(3),331(4),305 BNS ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ.

ಇದನ್ನೂ ಓದಿ: 🟣ಬೆಳ್ತಂಗಡಿ : ಸೌತಡ್ಕ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ಮತ್ತು
ಈ ಪ್ರಕರಣದ ತನಿಖೆಯ ಬಗ್ಗೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಹರಿರಾಮ್ ಶಂಕರ್ ಐ.ಪಿ.ಎಸ್ ರವರ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಸುಧಾಕರ ನಾಯ್ಕ ಕೆ.ಎಸ್.ಪಿ.ಎಸ್ ಹಾಗೂ ಪ್ರಭು ಡಿ.ಟಿ ಡಿ.ವೈ.ಎಸ್.ಪಿ ಉಡುಪಿರವರ ನೇತೃತ್ವದಲ್ಲಿ ಮಂಜುನಾಥ ಬಡಿಗೇರ, ಪೊಲೀಸ್ ನಿರೀಕ್ಷಕರು, ಉಡುಪಿ ನಗರ ಠಾಣೆ ಹಾಗೂ ಉಡುಪಿ ನಗರ ಠಾಣಾ ಪಿಎಸ್‌ಐ ರವರಾದ ಭರತೇಶ್ ಕಂಕಣವಾಡಿ, ಈರಣ್ಣ ಶಿರಗುಂಪಿ, ನಾರಾಯಣ ಬಿ., ಗೋಪಾಲಕೃಷ್ಣ ಜೋಗಿ ಹಾಗೂ ಸಿಬ್ಬಂಧಿಯವರಾದ ಹೆಚ್‌ಸಿ ಹರೀಶ್, ಹೆಚ್‌ಸಿ ಪ್ರಸನ್ನ ಸಿ, ಹೆಚ್‌ಸಿ ಬಶೀರ್, ಹೆಚ್‌ಸಿ ಜಯಕರ್, ಪಿಸಿ ಶಿವು ಕುಮಾರ್, ಪಿಸಿ ಹೇಮಂತ, ಪಿಸಿ ಆನಂದ, ಪಿಸಿ ಗಫೂರ್, ಪಿಸಿ ಸಂತೋಷ್ ರಾಥೋಡ್, ಪಿಸಿ ಮಲ್ಲಯ್ಯ, ಪಿಸಿ ಓಬಳೇಶ್, ಪಿಸಿ ಕಾರ್ತಿಕ್, ಪಿಸಿ ಕುಮಾರ್ ಕೊಪ್ಪದ್, ಪಿಸಿ ವಿನಯ್ ಕುಮಾರ್, ಎಹೆಚ್‌ಸಿ ಸಂತೋಷ್ ರವರ ತಂಡ ಉಡುಪಿಯ ಸರ್ಕಸ್ ಗ್ರೌಂಡ್, ರಾಷ್ಟ್ರೀಯ ಹೆದ್ದಾರಿ 66 ಬಳಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರೀಶೀಲಿಸಿ ಆರೋಪಿಗಳ ಮಾಹಿತಿ ಪಡೆದು, ಕಾರ್ಯಾಚರಣೆ ನಡೆಸಿ ಪ್ರಕರಣದ ಆರೋಪಿಗಳಾದ 1. ಬಂಗಡ @ ಬಾಂಗು @ ರಮೇಶ್ ಜವಾನ್ ಸಿಂಗ್(37), ತಂದೆ : ಹಿರ್ಜಿ ಜವಾನ್ ಸಿಂಗ್, ಬಗುಲಿ, ಕುಷ್ಕಿ ತಾಲೂಕು, ಧಾರ್ ಜಿಲ್ಲೆ, ಮಧ್ಯಪ್ರದೇಶ ಮತ್ತು 2. ಕಾಲಿಯಾ @ ಕಾಲು(25) ತಂದೆ ಕಲಂ ಸಿಂಗ್, ಕುಷ್ಕಿ ತಾಲೂಕು, ಧಾರ್ ಜಿಲ್ಲೆ, ಮಧ್ಯಪ್ರದೇಶ ದಸ್ತಗಿರಿ ಮಾಡಲಾಗಿರುತ್ತದೆ.
ಸದರಿ ಆರೋಪಿಗಳಿಂದ ಬೆಳ್ಳಿಯ ಆಭರಣಗಳಾದ 1) ಕಾಲು ಗೆಜ್ಜೆ, 2) ಸೊಂಟದ ನೇವಳ, 3) ಕೈಬಳೆ, 4) ಕಾಲುಂಗುರ, 5) ಸೊಂಟದ ಪಟ್ಟಿ, 6) ಬಟ್ಟಲು, 7) ಕಡಗ ಮತ್ತು 8)ಬ್ರಾಸ್‌ಲೈಟ್ ಸೇರಿ ಒಟ್ಟು ರೂಪಾಯಿ 80,970/- ಮೌಲ್ಯದ ಒಟ್ಟು 681.830 ಮಿಲಿ ಗ್ರಾಂನ ಬೆಳ್ಳಿ ಯ ಸೊತ್ತು, ರೂ 4,250/- ಮೌಲ್ಯದ 470 ಮಿಲಿಗ್ರಾಂ ಚಿನ್ನ ಹಾಗೂ 1700/- ರೂಪಾಯಿ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ಸದರಿ ಆರೋಪಿತರು ಮಧ್ಯಪ್ರದೇಶ ರಾಜ್ಯದವರಾಗಿದ್ದು, ಉಡುಪಿ ನಗರ ಠಾಣೆಯಲ್ಲಿ 2024ರಲ್ಲಿ ದಾಖಲಾದ 3 ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾರೆ ಅಲ್ಲದೇ ತಮ್ಮ ಸಹಚರರೊಂದಿಗೆ ಕರ್ನಾಟಕ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಕಳವು ಮಾಡಿರುವುದರ ಬಗ್ಗೆ ತಿಳಿಸಿರುತ್ತಾರೆ ಮತ್ತು ಮಹಾರಾಷ್ಟ್ರ ರಾಜ್ಯದಲ್ಲಿ ಸಹ ಪ್ರಕರಣಗಳು ದಾಖಲಾಗಿರುವುದು ಆರೋಪಿತರ ವಿಚಾರಣೆಯ ಸಮಯ ತಿಳಿದು ಬಂದಿರುತ್ತದೆ. ಈ ಕುರಿತು ಹೆಚ್ಚಿನ ತನಿಖೆ ಮಾಡುವುದು ಇರುತ್ತದೆ. 1ನೇ ಆರೋಪಿತನ ವಿರುದ್ಧ ಈಗಾಗಲೇ ಬೇರೆ ರಾಜ್ಯದಲ್ಲಿ 11 ಕಳ್ಳತನ ಪ್ರಕರಣಗಳು ಮತ್ತು 2ನೇ ಆರೋಪಿತನ ಮೇಲೆ ಉಡುಪಿ ಜಿಲ್ಲೆಯಲ್ಲಿ 3 ಪ್ರಕರಣಗಳು ದಾಖಲಾಗಿರುತ್ತದೆ. ಆರೋಪಿತರು ಶನಿವಾರ ಹಾಗೂ ಭಾನುವಾರದ ರಜಾ ದಿನಗಳಲ್ಲೇ ಕಳ್ಳತನ ಮಾಡುವ ಚಾಳಿ ಉಳ್ಳವರಾಗಿದ್ದು, ಇಬ್ಬರು ಆರೋಪಿತರನ್ನು ದಸ್ತಗಿರಿ ಮಾಡಲಾಗಿದ್ದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಮತ್ತು ಸದರಿ ಪ್ರಕರಣದಲ್ಲಿ ಪರಾರಿಯಾಗಿರುವ ಇನ್ನೊಬ್ಬ ಆರೋಪಿಯನ್ನು ಶೀಘ್ರವಾಗಿ ಪತ್ತೆ ಹಚ್ಚಲಾಗುವುದು.



