ಬಂದಾರು :(ಜು.24) ಬಂದಾರು ಗ್ರಾಮ ಕುರಾಯ ಶ್ರೀ ಸದಾಶಿವ ದೇವಸ್ಥಾನದಲ್ಲಿ ಆಟಿ ಅಮಾವಾಸ್ಯೆ ಪ್ರಯುಕ್ತ ತೀರ್ಥ(ಕಲಶ)ಸ್ನಾನ ಮತ್ತು ಮಹಾ ಪೂಜೆ ನಡೆಯಿತು.

ಭಕ್ತಾದಿಗಳು ಶ್ರೀ ಕ್ಷೇತ್ರಕ್ಕೆ ಆಗಮಿಸಿ ಶ್ರೀ ಸದಾಶಿವ ದೇವರ ಕೃಪೆಗೆ ಪಾತ್ರರಾದರು. ಆಡಳಿತಾಧಿಕಾರಿ, ಮಾಜಿ ವ್ಯವಸ್ಥಾಪನಾ ಸಮಿತಿ ಪದಾಧಿಕಾರಿಗಳು, ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಊರ ಪರವೂರ ಭಕ್ತರು ಆಗಮಿಸಿದ್ದರು.


