ಬೆಳ್ತಂಗಡ:(ಜು.25) ಕೊಕ್ಕಡ ಗ್ರಾಮದ ಉಪ್ಪಾರ ಪಳಿಕೆ,ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ,ಬೆಸ್ಟ್ ಫೌಂಡೇಶನ್ ಮತ್ತು ಸೌತಡ್ಕ ಸೇವಾ ಸಮಿತಿಯ ವತಿಯಿಂದ ಶಾಲಾ ಮಕ್ಕಳಿಗೆ ಬರೆಯುವ ಪುಸ್ತಕವನ್ನು ಬೆಸ್ಟ್ ಫೌಂಡೇಶನ್ ನ ಅಧ್ಯಕ್ಷರಾದ ರಕ್ಷಿತ್ ಶಿವರಾಂ ವಿತರಣೆ ಮಾಡಿದರು.

ಇದನ್ನೂ ಓದಿ: ⭕ಸಂಪಾಜೆ: ಕಾರು & ಲಾರಿ ನಡುವೆ ಭೀಕರ ಅಪಘಾತ
ಈ ಸಂದರ್ಭದಲ್ಲಿ ಸೌತಡ್ಕ ಮಹಾಗಣಪತಿ ಕ್ಷೇತ್ರದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಸುಬ್ರಹ್ಮಣ್ಯ ಶಬರಾಯ, ಸದಸ್ಯರಾದ ಪ್ರಶಾಂತ್ ಮಚ್ಚಿನ ಗಣೇಶ್ ಕಾಶಿ, ಹರಿಶ್ಚಂದ್ರ, ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನಾಗೇಶ್ ಕುಮಾರ್ ಗೌಡ, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷರಾದ ಹಕಿಮ್ ಕೊಕ್ಕಡ,
ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಯಪ್ರಕಾಶ್ ಬಾಳ್ತಿಲ್ಲಾಯ , ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು, ಮಕ್ಕಳ ಪೋಷಕರು ಮುಖ್ಯೋಪಾಧ್ಯಾಯರು, ಶಿಕ್ಷಕರು .ಹಾಗೂ ಪ್ರಮುಖರಾದ ಅರುಣ್ ಲೋಬೊ, ನವೀನ ಗೌಡ, ಆಸಿಫ್ ಐಡಿಯಲ್, ನಿತಿನ್ ಕಡಿರ, ಬಿ ಎಂ ಜಗದೀಶ್, ಗಣೇಶ್ ಪಿ.ಕೆ, ಕಲಂದರ್ ಕೊಕ್ಕಡ,ಉಪಸ್ಥಿತರಿದ್ದರು.


