ಬೆಳ್ತಂಗಡಿ:(ಜು.25) ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿಗಳಾದ ಆಂಟೋನಿ ಮರಿಯಪ್ಪ ಅವರನ್ನು ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜರವರು ಭೇಟಿಯಾಗಿ ಇತ್ತೀಚಿಗೆ ಕೊಕ್ಕಡದ ಬಳಿ ಆನೆ ದಾಳಿಗೆ ಮೃತಪಟ್ಟ ಬಾಲಕೃಷ್ಣ ಶೆಟ್ಟಿ ಅವರ ಕುಟುಂಬಕ್ಕೆ ಪರಿಹಾರ ಹಾಗೂ ಮಗಳಿಗೆ ಉದ್ಯೋಗ ದೊರಕಿಸಿ ಕೊಡುವ ಬಗ್ಗೆ ಹಾಗೂ

ಕಾಡು ಪ್ರಾಣಿಗಳಿಂದ ಕೃಷಿಕರಿಗೆ ಆಗುವ ತೊಂದರೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಕುರಿತು ಮತ್ತು ಉಜಿರೆ -ಚಾರ್ಮಾಡಿ ಹಾಗೂ ಉಜಿರೆ -ಪೆರಿಯಶಾಂತಿ ರಸ್ತೆಯ ದ್ವಿಪಥ ಕಾಮಗಾರಿ ಆರಂಭ ಆಗುವ ಸಂಧರ್ಭದಲ್ಲಿ ಅರಣ್ಯ ಇಲಾಖೆಯಿಂದ ನಿರಕ್ಷೇಪಣೆ ನೀಡುವ ಬಗ್ಗೆ ಹಾಗೂ ಹಲವಾರು ಬಡವರು ಆಶ್ರಯ ಪಡೆದಿರುವ 94C ಜಾಗದಲ್ಲಿ ಅರಣ್ಯ ಇಲಾಖೆಯ ತೊಡಕುಗಳನ್ನು ನಿವಾರಿಸಿ ನಿರಕ್ಷೇಪಣೆ ನೀಡುವ ಕುರಿತು ಚರ್ಚಿಸಿದರು.


