ಧರ್ಮಸ್ಥಳ:(ಜು.25) ಧರ್ಮಸ್ಥಳ ಕ್ಷೇತ್ರದ ಮೇಲೆ ಮಾಡುತ್ತಿರುವ ಅಪಪ್ರಚಾರ ಕೊನೆಯಾಗಬೇಕು, ಅಪಪ್ರಚಾರ ಮಾಡುತ್ತಿರುವವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಪ್ರಾರ್ಥಿಸಿ ಜು.25ರಂದು ಮುಂಜಾನೆ ಬೆಂಗಳೂರು, ಮಂಡ್ಯ ಕರವೇ ಮಹಿಳಾ ತಂಡದ ಸದಸ್ಯರು ಉರುಳು ಸೇವೆ ಮಾಡಿದರು.

ಇದನ್ನೂ ಓದಿ: ⭕Shocking News: ಲೈಂಗಿಕವಾಗಿ ತೃಪ್ತಿ ಪಡಿಸಲಿಲ್ಲವೆಂದು ಗಂಡನನ್ನು ಕೊಂದ ಹೆಂಡತಿ!
ಸುಮಾರು 50 ಹೆಚ್ಚು ಮಹಿಳೆಯರು ಬೆಳಗ್ಗೆ ಉರುಳು ಸೇವೆ ಮಾಡಿ ನಂತರ ದೇವರ ದರ್ಶನ ಪಡೆದು ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡುತ್ತಿರುವವರಿಗೆ ಶ್ರೀ ಮಂಜುನಾಥ ಸ್ವಾಮಿ ಸದ್ಭುದ್ಧಿಯನ್ನು ಕೊಡಲಿ ಹಾಗೂ ಧರ್ಮಸ್ಥಳಕ್ಕೆ ಅಂಟಿರುವ ಕಂಟಕ ದೂರವಾಗಲಿ ಎಂದು ಕರವೇ ಮಹಿಳಾ ಘಟಕದವರು ಪ್ರಾರ್ಥಿಸಿದರು. ಹಾಗೂ ದೇವಸ್ಥಾನದ ವಿರುದ್ಧ ಮಾತನಾಡುತ್ತಿರುವ ವಿರೋಧಿಗಳಿಗೆ ಎಚ್ಚರಿಕೆಯನ್ನು ನೀಡಿದರು.


