Sun. Jul 27th, 2025

ಉಡುಪಿ :(ಜು.26) ಕರ್ನಾಟಕ ಸರ್ಕಾರ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಉಡುಪಿ ವಲಯ ಹಾಗೂ ಎಸ್‌ ವಿ ಕೆ/ ಎಸ್‌ ವಿ ಎಸ್ ಆಂಗ್ಲ ಮಾಧ್ಯಮ ಸಂಸ್ಥೆ ಕಟಪಾಡಿ ಇವರ ಜಂಟಿ ಆಶ್ರಯದಲ್ಲಿ ಉಡುಪಿ ತಾಲೂಕು ಮಟ್ಟದ 14 ಮತ್ತು 17 ವಯೋಮಿತಿಯ ವಿದ್ಯಾರ್ಥಿಗಳ ಕರಾಟೆ ಸ್ಪರ್ಧೆಯು ಎಸ್‌ ವಿ ಎಸ್‌ ಆಂಗ್ಲ ಮಾಧ್ಯಮ ಸಭಾಂಗಣದಲ್ಲಿ 26-07-2025ರಂದು ಜರುಗಿತು.

ಇದನ್ನೂ ಓದಿ: 👏🏻🪖ಗೇರುಕಟ್ಟೆ: ಕಾರ್ಗಿಲ್ ವಿಜಯ ದಿವಸ ಆಚರಣೆ


ಎಸ್‌ ವಿ ಎಸ್‌ ವಿದ್ಯಾವರ್ಧಕ ಸಂಘದ ಸಂಚಾಲಕರಾದ ಕೆ ಸತ್ಯೇಂದ್ರ ಪೈಯವರು ಅಧ್ಯಕ್ಷತೆ ವಹಿಸಿದರು. ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ, ಕರಾಟೆಯು ಆತ್ಮರಕ್ಷಕ ಕಲೆಯಾಗಿದ್ದು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಟಪಾಡಿ ಗ್ರಾಮ ಪಂಚಾಯತ್‌ ಅಧ್ಯಕ್ಷೆ ಪ್ರಭಾ ಬಿ ಶೆಟ್ಟಿ, ಕರಾಟೆಯು ದೈಹಿಕ ಕೌಶಲ್ಯ ಮಾತ್ರವಲ್ಲದೆ, ಶಿಸ್ತು ಮತ್ತು ಸೃಜನ ಶೀಲತೆಯನ್ನು ಬೆಳೆಸುತ್ತದೆ ಎಂದು ಹಿತವಚನ ನೀಡಿದರು. ಉಡುಪಿ ತಾಲೂಕು ದೈಹಿಕ ಶಿಕ್ಷಣಾಧಿಕಾರಿ ರವೀಂದ್ರ ನಾಯಕ್‌ ರವರು ಪ್ರಾಸ್ತಾವಿಕ ನುಡಿಯ ಮೂಲಕ ಕರಾಟೆಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ತಿಳಿಸಿದರು. ಕಾಪು ತಾಲೂಕಿನ ಯುವ ಸಬಲೀಕರಣ ಮತ್ತು ಕ್ರೀಡಾ ಅಧಿಕಾರಿ ರಿತೇಶ್‌ ಶೆಟ್ಟಿ ಹಾಗೂ ಉಡುಪಿ ತಾಲೂಕಿನ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಕಿರಣ್‌ ಕುಮಾರ್‌ ಶೆಟ್ಟಿಯವರು ಸಾಂಧರ್ಭಿಕವಾಗಿ ಮಾತನಾಡುತ್ತಾ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.


ಶಾಲಾ ಆಡಳಿತ ಮಂಡಳಿಯ ಸದಸ್ಯರಾಗಿರುವ ಬಿ ಚಂದ್ರಕಾಂತ್‌ ಪೈ, ಕೆ ಶ್ರೀನಿವಾಸ ವಿ ಕಿಣಿ , ಕೆ ಗಣೇಶ್‌ ಕಿಣಿ ಮತ್ತು ಕೆ ವೆಂಕಟರಮಣ ಭಟ್‌, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಡುಪಿ ವಲಯದ ಅಧಿಕಾರಿ ವಸಂತ ಜೋಗಿ, ಉಡುಪಿ ಜಿಲ್ಲಾ ಕರಾಟೆ ಶಿಕ್ಷಕರ ಸಂಘದ ಅಧ್ಯಕ್ಷ ರೋಹಿತಾಕ್ಷ, ರಾಜ್ಯ ಕರಾಟೆ ಕಾರ್ಯದರ್ಶಿ ರವಿ ಸಾಲ್ಯಾನ್‌, ಪ್ರಧಾನ ಕಾರ್ಯದರ್ಶಿ ವಾಮನ್‌ ಪಾಲನ್‌, ಉಡುಪಿ ಕರಾಟೆ ಸಮಿತಿಯ ಅಧ್ಯಕ್ಷ ಕೀರ್ತಿ ಜಿ ಕೆ ,ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಗ್ರೇಡ್‌ 1 ಅಧ್ಯಕ್ಷ ವರದರಾಜ್‌ ನಾಯಕ್‌ , ಶಾಲಾ ಶಿಕ್ಷಕ- ರಕ್ಷಕ ಸಂಘದ ಉಪಾಧ್ಯಕ್ಷೆ ಪ್ರಿಯಾ ಶೆಣೈ ಆಡಳಿತ ನಿರ್ವಹಣಾಧಿಕಾರಿ ಸುಧಾಕರ್‌ ಬ್ರಹ್ಮಾವರ ಶಾಲಾ ಮುಖ್ಯೋಪಾಧ್ಯಾಯಿನಿ ಶ್ವೇತಾ ಶೆಟ್ಟಿ ಉಪಸ್ಥಿತರಿದ್ದರು.


42 ಶಾಲೆಗಳಿಂದ 328 ವಿದ್ಯಾರ್ಥಿಗಳು ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿದರು. ಉಡುಪಿ ತಾಲೂಕಿನ ಶಾಲೆಗಳ 61 ಶಿಕ್ಷಕರು ಮತ್ತು ನುರಿತ 25 ಕರಾಟೆ ಶಿಕ್ಷಕರು ಸ್ಪರ್ಧೆಯನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ಶಿಕ್ಷಕಿಯರಾದ ಶಿಲ್ಪ ಮತ್ತು ದೀಪಿಕ ಕಾರ್ಯಕ್ರಮ ನಿರ್ವಹಣೆಗೈದರು. ಶಾಲಾ ವಿದ್ಯಾರ್ಥಿನಿಯರಿಂದ ಪ್ರಾರ್ಥನೆ ಬಳಿಕ ಶೈಕ್ಷಣಿಕ ಸಲಹೆಗಾರ ದೇವೇಂದ್ರ ನಾಯಕ್‌ ಸರ್ವರನ್ನು ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕಿ ಜಯಲಕ್ಷ್ಮೀ ವಂದನಾರ್ಪಣೆಗೈದರು.

Leave a Reply

Your email address will not be published. Required fields are marked *