ಬೆಳ್ತಂಗಡಿ:( ಜು.28) ವಿಷ ಸೇವಿಸಿ ವಿವಾಹಿತೆ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ಮರೋಡಿ ಗ್ರಾಮದಲ್ಲಿ ನಡೆದಿದೆ.

ಮರೋಡಿ ಗ್ರಾಮದ ಮೂಕಾಂಬಿಕಾ ನಿಲಯ ಪಚ್ಚಡಿ ಮನೆಯ ವಾಣಿಶ್ರೀ (26 ವ) ಮೃತ ಮಹಿಳೆ.ಮದುವೆಯಾಗಿ ಒಂದು ವರ್ಷ ಮೂರು ತಿಂಗಳು ಆಗಿರುವ ವಿವಾಹಿತ ಮಹಿಳೆ ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯಲ್ಲಿ ಯಾರೂ ಇಲ್ಲದ ವೇಳೆ ವಿಷವನ್ನು ಸೇವಿಸಿದ್ದಾರೆ.

ಹೊಟ್ಟೆನೋವು ಎಂದು ಹೇಳಿದಾಗ ಪಕ್ಕದ ಮನೆಗೆ ತೆರಳಿದ್ದ ದೊಡ್ಡಮ್ಮ ರವರಿಗೆ ಅನುಮಾನ ಬಂದು ತಕ್ಷಣ ಮಹಿಳೆಯ ತಂದೆಗೆ ಕರೆ ಮಾಡಿದ್ದಾರೆ. ತಕ್ಷಣ ತಂದೆ ಕರೆದುಕೊಂಡು ಹೋಗಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.ಘಟನಾ ಸ್ಥಳಕ್ಕೆ ವೇಣೂರು ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.

