ಬೆಳ್ತಂಗಡಿ :(ಜು.28) ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶ್ರೀ ಮಂಜುನಾಥ ದಳದ ಕಬ್ಸ್ ಬುಲ್ ಬುಲ್ಸ್ , ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳು ಪೋಷಕರ ದಿನಾಚರಣೆಯನ್ನು ಆಚರಿಸಿದರು.

ಇದನ್ನೂ ಓದಿ: 🔴ಕಾಶಿಪಟ್ಣ: ಕಾಶಿಪಟ್ಣದ 14 ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿಯ ಪೂರ್ವಭಾವಿ ಸಭೆ
ವಿದ್ಯಾರ್ಥಿಗಳು ತಂದೆ ತಾಯಿ ,ಅಜ್ಜ ಅಜ್ಜಿಯ ಆಶೀರ್ವಾದವನ್ನು ಪಡೆದು ಕೊಂಡರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಸಂಸ್ಥೆಯ ಮುಖ್ಯ ಆಯುಕ್ತ ರಾದ .ಪಿ.ಜಿ. ಆರ್ ಸಿಂದ್ಯಾ ರವರ ಸೂಚನೆಯ ಮೇರೆಗೆ ಕಾರ್ಯಕ್ರಮ ಆಯೋಜಿಸಲಾಯಿತು.

ಮುಖ್ಯ ಶಿಕ್ಷಕಿ ಹೇಮಲತಾ ಎಂ ಆರ್ ರವರ ಸಹಕಾರದೊಂದಿಗೆ , ತಳಿ ಸಂಸ್ಥೆ ಕಾರ್ಯದರ್ಶಿ ಶಿಕ್ಷಕಿ ಶ್ರೀಮತಿ ಪ್ರಮೀಳಾ ಪೂಜಾರಿ ಯವರ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಶಿಕ್ಷಕರಾದ ಮಂಜುನಾಥ್ ಜಯರಾಮ್, ಗೀತಾ , ರಮ್ಯ, ಕಾರುಣ್ಯ, ಜಯಲಕ್ಷ್ಮಿ ,ಪ್ರಮೀಳಾ , ನೀತಾ ಸಹಕರಿಸಿದರು.

