ಬೆಳ್ತಂಗಡಿ:(ಜು.28) ವಿಪರೀತ ಗಾಳಿ ಮಳೆಗೆ ಮಂಜೊಟ್ಟಿ ಲತೀಫ್ ಸಾಹೇಬ್ ಎಂಬವರ ಮನೆಯ ಮೇಲೆ ದೊಡ್ಡ ತೆಂಗಿನ ಮರ ಬಿದ್ದು ಮನೆಯ ಹತ್ತು ಹನ್ನೆರಡರಷ್ಟು ಶೀಟುಗಳು ಬಿದ್ದು ಪುಡಿ ಪುಡಿಯಾಗಿ ಮನೆಯ ಹಂಚುಗಳು ಸಾಧಾರಣ ನೂರ ಇಪ್ಪತ್ತೈದರಷ್ಟು ಬಿದ್ದು ಸಂಪೂರ್ಣ ಹಾನಿ ಯಾಗಿದೆ.

ಇದನ್ನೂ ಓದಿ: ⭕ಧರ್ಮಸ್ಥಳ: ಬೊಳಿಯಾರ್ ಬಳಿ ಒಂಟಿ ಸಲಗ ಪ್ರತ್ಯಕ್ಷ
ಈ ಘಟನೆ ಬಗ್ಗೆ ಸುದ್ದಿ ತಿಳಿದ ಆಟೋ ಚಾಲಕರಾದ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕರು ಮೂರು ಮಂದಿ ತಕ್ಷಣ ಮಂಜುನಾಥ್, ಒಲ್ವಿನ್ ಡಿಸೋಜ, ಹರಿಶ್ಚಂದ್ರ ರವರು ಕೂಡಲೇ ಲತೀಫ್ ಸಾಹೇಬ್ ರವರ ಮನೆಗೆ ಧಾವಿಸಿ ಬಿದ್ದಿರುವ ತೆಂಗಿನ ಮರವನ್ನು ಮೆಷಿನ್ ಯಂತ್ರದಿಂದ ಕಟ್ ಮಾಡಿ ತೆರವು ಗೊಳಿಸಿ ಮನೆಗೆ ಹಂಚುಗಳನ್ನು ಹಾಕಿ ಸರಿಪಡಿಸಿ ಸ್ವಯಂ ಸೇವಕರು ಕಾರ್ಯಾಚರಣೆ ನಡೆಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧಿಕಾರಿಗಳು ಉಪಸ್ಥಿತರಿದ್ದರು.


