Tue. Jul 29th, 2025

ಉಡುಪಿ: ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಉತ್ತೇಜನ – 2025 ಕಾರ್ಯಕ್ರಮ

ಉಡುಪಿ:(ಜು.29) 2024-25 ನೇ ಸಾಲಿನ ಪಬ್ಲಿಕ್ ಪರೀಕ್ಷೆಯಲ್ಲಿ ಅತ್ಯಧಿಕ ಅಂಕವನ್ನು ಗಳಿಸಿದ ಸಂಸ್ಥೆಯ ವಿದ್ಯಾರ್ಥಿಗಳಿಗೆ ಸನ್ಮಾನ
‘ ಉತ್ತೇಜನ ‘ ಜ್ಞಾನದ ಸಿರಿಗೆ ಸನ್ಮಾನ ಘೋಷ ವಾಕ್ಯದೊಂದಿಗೆ ಆಯೋಜಿಸಿದೆ.

ಇದನ್ನೂ ಓದಿ: ⭕ಕಾಸರಗೋಡು: ತಂದೆಯಿಂದಲೇ ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ

ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಶೈಕ್ಷಣಿಕ ಸಂಯೋಜಿತ ಸಂಸ್ಥೆ ಹೈಸ್ಕೂಲ್ ವಿಭಾಗದ 2024 – 25ನೇ ಸಾಲಿನ 10ನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ಸಂಸ್ಥೆಯಲ್ಲಿ ಅತ್ಯಧಿಕ ಅಂಕವನ್ನು ಪಡೆದ ವಿದ್ಯಾರ್ಥಿಗಳಿಗೆ ‘ ಉತ್ತೇಜನ’ ಜ್ಞಾನದ ಸಿರಿಗೆ ಸನ್ಮಾನ ಕಾರ್ಯಕ್ರಮವಾಗಿದೆ.


ಸರಸ್ವತಿ ವಿದ್ಯಾಲಯ ಸಿದ್ದಾಪುರ ಸಂಸ್ಥೆಯ ಟಾಪರ್ ಗಿರೀಶ್ ನಾಯಕ್ , ಯು .ಎಸ್. ನಾಯಕ್ ಪ್ರೌಢಶಾಲೆ ಪಟ್ಲ ಟಾಪರ್ ಅಭಿನವ ಅಶೋಕ್ ನಾಯ್ಕ್ , ಡ್ಯುಯಲ್ ಸ್ಟಾರ್ ಶಾಲೆ ಅಮಾಸೆಬೈಲು ಟಾಪರ್ ಲಹರಿ ಎಸ್ .ಶೆಟ್ಟಿ, ಸನ್ಮಾನಿಸಲಾಯಿತು.ಪಿ .ಆರ್ ಎನ್ ಅಮೃತ ಭಾರತಿ ವಿದ್ಯಾ ಕೇಂದ್ರ ಹೆಬ್ರಿ ಯ ಟಾಪರ್ ಸಾನ್ವಿ.ಕೆ , ಅಕ್ಷಯ್ ಅಶೋಕ್ ಶೆಟ್ಟಿ , ಸ್ವಸ್ತಿ ಎಸ್ . ಕಿಣಿ . ಅಮೃತ ಭಾರತಿ‌ ವಿದ್ಯಾಲಯ ಹೆಬ್ರಿ ಟಾಪರ್ ಪೂರ್ವಿ .ಎಂ.ರಾವ್ , ಶ್ರೀ ರಾಮ ವಿದ್ಯಾ ಕೇಂದ್ರ ಕೋಡಿ ಟಾಪರ್ ದೀಕ್ಷಾ ದೇವಾಡಿಗ , ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ ಸ್ಕೂಲ್ ಟಾಪರ್ ಅನುಷ ಪೂಜಾರಿ ಇವರಿಗೆ ಸನ್ಮಾನ ನಡೆಯುವುದು. ಎಂದು ವಿದ್ಯಾಭಾರತಿ ಕರ್ನಾಟಕ ಜಿಲ್ಲಾ ಕಾರ್ಯದರ್ಶಿ ಮಹೇಶ ಹೈಕಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸನ್ಮಾನ ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರು, ಮುಖ್ಯೋಪಾಧ್ಯಾಯರು , ಬೋಧಕ ಬೋಧಕೇತರ ವರ್ಗದವರು,ವಿದ್ಯಾಭಾರತಿ ಕರ್ನಾಟಕ ಜಿಲ್ಲಾ ಘಟಕದ ಅಧ್ಯಕ್ಷರು ,ಪದಾಧಿಕಾರಿಗಳು, ಕಾರ್ಯದರ್ಶಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *