ಬೆಳ್ತಂಗಡಿ:(ಜು.29) ಯುನೈಟೆಡ್ ಎಂಪವರ್‌ಮೆಂಟ್ ಅಸೋಸಿಯೇಷನ್ ಬೆಳ್ತಂಗಡಿ ವಲಯ ವಾರ್ಷಿಕ ಮಹಾಸಭೆಯು ನಡೆಯಿತು. ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ಯು.ಇ.ಎ ರಾಜ್ಯ ಉಪಾಧ್ಯಕ್ಷ ಅಬ್ಬೂಬಕರ್ ಉಜಿರೆ ಅವರು ವಹಿಸಿದ್ದರು.

ಇದನ್ನೂ ಓದಿ: 🔴ಬೆಳಾಲು : ಶ್ರೀ ಅನಂತಪದ್ಮನಾಭ ದೇವಸ್ಥಾನ ಅನಂತೋಡಿ ದೇವಸ್ಥಾನದಲ್ಲಿ ನಾಗರಪಂಚಮಿಯ ಪ್ರಯುಕ್ತ
ಯು.ಇ.ಎ ಅಧ್ಯಕ್ಷ ಸಿರಾಜ್ ಯರ್ಮಲ್ ಹಾಗೂ ಮಹಾಸಚಿವ ಇಮ್ತಿಯಾಜ್ ಹಜಾಜ್ ಅವರು ಯುನೈಟೆಡ್ ಎಂಪವರ್‌ಮೆಂಟ್ ಅಸೋಸಿಯೇಷನ್‌ನ ದೃಷ್ಟಿಕೋನ ಮತ್ತು ಯೋಜನೆಗಳ ಕುರಿತು ವಿವರಿಸಿದರು. ಈ ಸಂದರ್ಭದಲ್ಲಿ ಸಮಿತಿಯ ರಚನೆ ನಡೆಯಿತು.

ಗೌರವಾಧ್ಯಕ್ಷರಾಗಿ ಎಸ್.ಎ ಖಾದರ್, ಅಧ್ಯಕ್ಷರಾಗಿ ಫಝಲ್ ಉರ್ ರಹ್ಮಾನ್, ಉಪಾಧ್ಯಕ್ಷರುಗಳಾಗಿ ರಹ್ಮಾನ್ ಉಜಿರೆ, ಅಶ್ರಫ್ ಉಜಿರೆ, ಯಹ್ಯಾ ಉಜಿರೆ, ಮುಖ್ಯ ಕಾರ್ಯದರ್ಶಿಯಾಗಿ ಹಮ್ಜಾ ಉಜಿರೆ, ಖಜಾಂಚಿಯಾಗಿ ಹಾರೀಸ್ (ಅಚ್ಚಿ), ಸಹ ಕಾರ್ಯದರ್ಶಿಗಳಾಗಿ ಅಶ್ವೀರ್, ಶಲೀಲ್ , ಸಾದಿಕ್ , ಸಲೀಮ್, ಕ್ರೀಡಾ ಕಾರ್ಯದರ್ಶಿಗಳಾಗಿ ರಿಹಾನ್, ಶೆರಿಫ್ ನೆರಿಯಾ, ನಿಜಾರ್ , ಹಕೀಮ್, ಯು.ಸಿ.ಎಲ್ ಆಯ್ಕೆ ಸಮಿತಿಯಲ್ಲಿ ಅಬೂಬಕರ್ ಉಜಿರೆ, ಉಮರ್ ಅಬ್ಬಾ ಇಂಡಿಯನ್, ರೌಫ್, ಮಾಧ್ಯಮದ ವಿಭಾಗ ಇಂಚಾರ್ಜ್ ,ಅಶ್ರಫ್ ಅಲಿ ಕುಂಚಿ, ರಾಜ್ಯ ಇಂಚಾರ್ಜ್ – ಬೆಳ್ತಂಗಡಿ ವಲಯ ಅಬೂಬಕರ್ ಉಜಿರೆ ಆಯ್ಕೆಯಾದರು.
ಸಭೆಯ ಅಂತ್ಯ ದುವಾ ಮತ್ತು ಭೋಜನದೊಂದಿಗೆ ನಡೆಯಿತು.

