ಬಂಟ್ವಾಳ:(ಜು.29) ಬಂಟ್ವಾಳ ಪುರಸಭಾ ವ್ಯಾಪ್ತಿಯ ಜಕ್ರಿಬೆಟ್ಟು ಡ್ಯಾಂ ಬಳಿ ಸ್ಕೂಟರ್ ಅನಾಥ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸ್ಕೂಟರ್ ನ ಮಾಹಿತಿ ಪಡೆದ ಬಂಟ್ವಾಳ ನಗರ ಠಾಣಾ ಪೊಲೀಸರು ಪರಿಶೀಲನೆ ನಡೆಸಿದಾಗ ಕಡೇಶಿವಾಲಯದ ಹೇಮಂತ್ ಎಂಬವನಿಗೆ ಸೇರಿದ ವಾಹನ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ⭕ಕುಂದಾಪುರ: ನೇಣು ಬಿಗಿದುಕೊಂಡು ಮಹಿಳೆ ಆತ್ಮಹತ್ಯೆ
ಈತ ಅವಿವಾಹಿತ ಯುವಕನಾಗಿದ್ದು ಜುಲೈ 28 ರಂದು ನಾಪತ್ತೆಯಾಗಿರುವ ಕುರಿತು ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಜಕ್ರಿಬೆಟ್ಟು ನೇತ್ರಾವತಿ ನದಿ ಕಿನಾರೆಯಲ್ಲಿ ಸ್ಕೂಟರ್ ಒಂದು ಅನಾಥವಾಗಿ ಸಿಕ್ಕಿದ್ದು, ಅನೇಕ ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ. ಹೇಮಂತ್ ಆಚಾರ್ಯ ಅವರು ನೀರಿನ ಫಿಲ್ಟರ್ ರಿಪೇರಿ ಕೆಲಸ ಮಾಡುತ್ತಿದ್ದ ಈತ ನಿನ್ನೆಯಿಂದ ನಾಪತ್ತೆಯಾಗಿದ್ದ.

ಈತ ಸ್ಕೂಟರ್ ಇಲ್ಲಿ ನಿಲ್ಲಿಸಿ ಕಾಣೆಯಾಗಿರುವುದರಿಂದ ಈತನ ಪತ್ತೆಗಾಗಿ ಗ್ರಾಮಾಂತರ ಪೋಲೀಸ್ ತಂಡ ಹಾಗೂ ನಗರ ಪೋಲೀಸ್ ಠಾಣೆಯ ಸಿಬ್ಬಂದಿಗಳು ಹುಡುಕಲು ಪ್ರಾರಂಭಿಸಿದ್ದಾರೆ. ಇದರ ಜತೆ ಅಗ್ನಿಶಾಮಕ ದಳದ ಸಿಬ್ಬಂದಿ ನೇತ್ರಾವತಿ ನದಿಯಲ್ಲಿ ಶೋಧ ಕಾರ್ಯ ಆರಂಭಿಸಿದ್ದಾರೆ.

