ಚಾರ್ಮಾಡಿ: (ಜು.29) ಚಾರ್ಮಾಡಿ ಗ್ರಾಮದ ಸಾರ್ವಜನಿಕ ಹಿಂದೂ ರುದ್ರಭೂಮಿ ಅಭಿವೃದ್ಧಿ ಸಮಿತಿ ಇದರ ನೂತನ ಸಮಿತಿಯನ್ನು ರಚಿಸಲಾಯಿತು.

ಇದನ್ನೂ ಓದಿ: ⭕ಕಡಬ: ಅನಾರೋಗ್ಯದಿಂದ ಬಳಲುತ್ತಿದ್ದ ಯುವತಿ ಸಾವು
ನೂತನ ಸಮಿತಿಯ ಗೌರವ ಅಧ್ಯಕ್ಷರಾಗಿ ಶ್ರೀ ಪ್ರಕಾಶ್ ನಾರಾಯಣ ರಾವ್ ಮಠತಮಜಲು, ಅಧ್ಯಕ್ಷರಾಗಿ ಶ್ರೀನಿವಾಸ್ ಕುಲಾಲ್, ಕಾರ್ಯದರ್ಶಿಯಾಗಿ ಗಣೇಶ್ ಕೋಟ್ಯಾನ್,
ಕೋಶಾಧಿಕಾರಿಯಾಗಿ ಯಶೋಧರ ಪೂಜಾರಿ ವಲಸರಿ ಮತ್ತು ಸದಸ್ಯರಾಗಿ ಸದಾಶಿವ, ಕೆ. ರಾಜೇಶ್ ಬಂಗ್ಲೆಗುಡ್ಡೆ,ಯೋಗೀಶ್ ಗೌಡ ಅಂತರ, ಗೋಪಾಲ ಕೃಷ್ಣ ಕೆರೆಕೋಡಿ, ರಾಮಣ್ಣ ಭಂಡಾರಿ, ದಿವಿನ್ ಮೈಕಾನ್, ಕಿರಣ್ ವಲಸರಿ, ಜಯಕುಮಾರ್ ದೇವಿನಗರ, ಸುಖೇಶ್ ಶೆಟ್ಟಿ, ರವಿ ಪೂಜಾರಿ ಗುತ್ತಿಗೆ, ಕೇಶವತಿ ಭೀಮಂಡೆ, ಭವಾನಿ ವಲಸರಿ ಇವರುಗಳು ಆಯ್ಕೆಗೊಂಡರು.

ಈ ಸಭೆಯಲ್ಲಿ ಚಾರ್ಮಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ್, ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಾರದ, ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ್ ಹೊಸಮಠ, ಕೊರಗಪ್ಪ ಗೌಡ, ಕೃಷ್ಣ ರಾವ್ ಚಾರ್ಮಾಡಿ ಹಾಗೂ ಪ್ರಮುಖರು ಉಪಸ್ಥಿತರಿದ್ದರು. ಗೋಪಾಲ ಕೃಷ್ಣ ಸ್ವಾಗತಿಸಿ, ಗಣೇಶ್ ಕೋಟ್ಯಾನ್ ವಂದನಾರ್ಪಣೆ ಮೂಲಕ ಕಾರ್ಯಕ್ರಮ ಕೊನೆಗೊಳಿಸಲಾಯಿತು.

