ಪುತ್ತೂರು:(ಜು.29) ನೇಣುಬಿಗಿದುಕೊಂಡು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರಿನ ನೆಹರುನಗರದಲ್ಲಿ ನಡೆದಿದೆ.

ಇದನ್ನೂ ಓದಿ: ⭕ಪುತ್ತೂರು: ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ವಂಚಿಸಿದ ಪ್ರಕರಣ
ನೆಹರುನಗರ ಕಲ್ಲೇಗ ಶ್ರೀ ಸಾಯಿ ವೆಲ್ಡಿಂಗ್ ವರ್ಕ್ಸ್ ಮಾಲಕ ವಿಶ್ವಾಸ್ (37) ತನ್ನ ವೆಲ್ಡಿಂಗ್ ಕಚೇರಿಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
ಕಲ್ಲೇಗ ನಿವಾಸಿ ವಿಶ್ವಾಸ್ ಅವರು ಮನೆಯ ಬಳಿಯೇ ಶ್ರೀ ಸಾಯಿ ವೆಲ್ಡಿಂಗ್ ವರ್ಕ್ಸ್ ಉದ್ಯಮ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.


