Wed. Jul 30th, 2025

ಸೌತಡ್ಕ: ಸೇವಾಧಾಮದಲ್ಲಿ ನಿಯೋ ಮೋಷನ್ ವಿಥ್ ಕಾರ್ಟ್ ನ ವಿತರಣೆ ಮತ್ತು ಸೇವಾಧಾಮ ಸಂಸ್ಥಾಪಕರ ಹುಟ್ಟುಹಬ್ಬ ಆಚರಣೆ

ಸೌತಡ್ಕ(ಜುಲೈ. 30) : ಸೆಲ್ಕೊ ಫೌಂಡೇಶನ್, ಬೆಂಗಳೂರು ಮತ್ತು ನಿಯೋ ಮೋಶನ್ ಅಸಿಸ್ಟಿವ್‌ ಡಿವೈಸ್‌ ಇವುಗಳ ಆಶ್ರಯದಲ್ಲಿ ಸೇವಾಭಾರತಿ(ರಿ.),ಕನ್ಯಾಡಿ ಇದರ ಸಹಕಾರದಲ್ಲಿ ಚಕ್ರದ ಮೇಲೆ ಜೀವನೋಪಾಯ ನಿಯೋ ಬೋಲ್ಟ್ ವಿತರಣೆ ಮತ್ತು ಸೇವಾಭಾರತಿಯ ಖಜಾಂಚಿ ಮತ್ತು ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಕೆ. ವಿನಾಯಕ ರಾವ್ ರವರ ಹುಟ್ಟುಹಬ್ಬವನ್ನು ಜುಲೈ 29 ರಂದು ಸೇವಾಧಾಮ ಪುನಶ್ಚೇತನ ಕೇಂದ್ರ ಸೌತಡ್ಕದಲ್ಲಿ ಆಚರಿಸಲಾಯಿತು.

ದಿವ್ಯಾಂಗರು ಮತ್ತೆ ಸಮಾಜದತ್ತ ಬರಲು ದಿವ್ಯಾಂಗರಿಗೆ ಸ್ವ- ಉದ್ಯೋಗ ಕಲ್ಪಿಸಲು ಈ ಯೋಜನೆಯನ್ನು ರೂಪಿಸಿದ್ದು ನಿಯೋ ಮೋಶನ್ ಅಸಿಸ್ಟಿವ್ ಡಿವೈಸ್ ಇದ್ದಕೆ ಪೂರಕವಾಗಿ ಆರ್ಥಿಕ ಸಹಕಾರ ಒದಗಿಸಿದ್ದು ಮತ್ತು ಸೆಲ್ಕೋ ಫೌಂಡೇಶನ್ ನ ಇದು ಒಂದು ಉತ್ತಮ ಯೋಜನೆಯಾಗಿದೆ. ಇದನ್ನು ಖರೀದಿಸುವಾಗ ಒಟ್ಟು ಮೊತ್ತದಲ್ಲಿ ಶೇಕಡಾ 50% ಸೆಲ್ಕೊ ಕಂಪೆನಿಯು ಸಹಕಾರ ನೀಡುತ್ತಿದ್ದು ಉಳಿದ ಮೊತ್ತಕ್ಕೆ ಫಲಾನುಭವಿಯ ಹೆಸರಿನಲ್ಲಿ EMI ಮಾಡಿ ತಾನೇ ದುಡಿದು ಬಾಕಿ ಮೊತ್ತ ಕಟ್ಟುವ ಅವಕಾಶವನ್ನು ಕಲ್ಪಿಸಿಕೊಟ್ಟಿದ್ದಾರೆ. ಈ ದೃಷ್ಟಿಯಲ್ಲಿ ಆಯ್ದ ನಾಲ್ಕು ಫಲಾನುಭವಿಗಳಿಗೆ ನಿಯೋ ಮೋಷನ್ ವಿಥ್ ಕಾರ್ಟ್ ಅನ್ನು ವಿತರಣೆ ಮಾಡಲಾಯಿತು.

ಮಹಾಗಣಪತಿ ಸೇವಾ ಟ್ರಸ್ಟಿನ ಅಧ್ಯಕ್ಷರಾದ ಶ್ರೀ ಕೆ. ಕೃಷ್ಣ ಭಟ್, ಕೆ. ವಿನಾಯಕ ರಾವ್ ಅವರು ಇನ್ನಷ್ಟು ಸೇವಾಕಾರ್ಯ ಮಾಡುವ ಧೈರ್ಯ, ಹಾಗೆ ದೇವರು ಅವರಿಗೆ ಆರೋಗ್ಯವನ್ನು ಕರುಣಿಸಲಿ ಎಂದು ಅವರ ಹುಟ್ಟುಹಬ್ಬಕ್ಕೆ ಶುಭ ಹಾರೈಸಿದರು.

ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ತನ್ನ ಬದುಕಿನ ಏಳಿಗೆಗಾಗಿ ಮಾರ್ಗದರ್ಶನ ಸಹಕಾರ ನೀಡಿದವರನ್ನು ಸ್ಮರಿಸುತ್ತ. ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರ ಪುನಶ್ಚೇತನ ಕೇಂದ್ರ ನಿರ್ಮಾಣದ ಹಂತದಲ್ಲಿದ್ದು ಬೇರೆ ಬೇರೆ CSR ಗಳಿಂದ, ದಾನಿಗಳಿಂದ ಸಹಕಾರವನ್ನು ಬೇಡಿದ್ದೇವೆ ಹಾಗೆ ಇದರ ನಿರೀಕ್ಷೆಯಲ್ಲಿದೇವೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.

ಫಲಾನುಭವಿಗಳು, ಆರೈಕೆದಾರರು ಹಾಗೂ ಸಿಬ್ಬಂದಿವರ್ಗದವರಿಂದ ಹಾಡಿನ ಮೂಲಕ ಮನರಂಜಿಸಲಾಯಿತು ಜೊತೆಗೆ ಶ್ರೀ ಕೆ. ವಿನಾಯಕ ರಾವ್ ಅವರ ಬಗ್ಗೆ ತಮ್ಮ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಮತ್ತು ಹಣ್ಣಿನ ಗಿಡವನ್ನು ಉಡುಗೊರೆಯಾಗಿ ನೀಡಲಾಯಿತು.

ಕೊಕ್ಕಡ ಕೆನರಾ ಬ್ಯಾಂಕ್ ನ ಶಾಖಾ ವ್ಯವಸ್ಥಾಪಕರಾದ ಶ್ರೀ ಸಾಗರ್, ಕೊಕ್ಕಡದ ನಿವೃತ ಮುಖ್ಯೋಪಾಧ್ಯಾಯರು ಶ್ರೀ ಗಣೇಶ್ ಪಿ ಐತಾಳ್, ಕನ್ಯಾಡಿ ಸೇವಾಭಾರತಿ (ರಿ.)POSH ಕಮಿಟಿ ಅಧ್ಯಕ್ಷರಾದ ಶ್ರೀಮತಿ ವಸಂತಿ ಗೌಡ, ಸೇವಾಭಾರತಿ ಕಾರ್ಯದರ್ಶಿ ಶ್ರೀ ಬಾಲಕೃಷ್ಣ ಹಾಗೂ ಸಂಸ್ಥೆಯ ದಾನಿಗಳು, ಹಿತೈಷಿಗಳು, ಸನಿವಾಸಿಗಳು, ಆರೈಕೆದಾರರು ಹಾಗೂ ಸಿಬ್ಬಂದಿವರ್ಗದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಫಂಡ್ ರೈಸಿಂಗ್ ಮತ್ತು ಮಾರ್ಕೆಟಿಂಗ್ ಮ್ಯಾನೇಜರ್ ಶ್ರೀ ಆಶಿತ್ ಸಿ ಪಿ ಸ್ವಾಗತಿಸಿ, ಸೇವಾಭಾರತಿಯ ಹಿರಿಯ ಪ್ರಬಂಧಕರಾದ ಶ್ರೀ ಚರಣ್ ಕುಮಾರ್ ಎಂ ಮತ್ತು ಕಾರ್ಯಕ್ರಮ ಸಂಯೋಜಕರಾದ ಶ್ರೀ ನಾಗಾರ್ಜುನ್ ಡಿ ಎ ನಿರೂಪಣೆ ಮಾಡಿ ಧನ್ಯವಾದವಿತ್ತರು.

Leave a Reply

Your email address will not be published. Required fields are marked *