ಬೆಳ್ತಂಗಡಿ: (ಜು.30) ಪುತ್ತೂರಿನ ಜಿ ಟೆಕ್ ಕಂಪ್ಯೂಟರ್ ಎಜುಕೇಶನ್ ನ ಶ್ರೀ ಆಕಾಶ್ ಜನಾರ್ಧನ್ ರವರು ಸೌತಡ್ಕ, ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರ ಪುನಶ್ಚೇತನ ಕೇಂದ್ರ ಸೇವಾಧಾಮಕ್ಕೆ ಜುಲೈ 29 ರಂದು ಭೇಟಿ ನೀಡಿದರು.

ಇದನ್ನೂ ಓದಿ: 🟠ಕಣಿಯೂರು: ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಕಣಿಯೂರು(ರಿ) ಮತ್ತು ಸಾರ್ವಜನಿಕರ ವತಿಯಿಂದ ನಡೆಯುವ
ಡಿಜಿಟಲ್ ಮಾರ್ಕೆಟಿಂಗ್ ಮತ್ತು ಸೈಬರ್ ಸೆಕ್ಯೂರಿಟಿ ಸ್ಕ್ಯಾಮ್ ಆದಾಗ ಸೈಬರ್ ಅಪರಾಧಿಗಳಿಂದ ನಮ್ಮನ್ನು ನಾವು ಹೇಗೆ ರಕ್ಷಿಸಿಕೊಳ್ಳಬೇಕು ಮತ್ತು ನಾವು ಏನು ಮಾಡಬಹುದು, ಸೈಬರ್ ಅಪರಾಧವನ್ನು ನಾವು ಹೇಗೆ ವರದಿ ಮಾಡಬಹುದು ಮತ್ತು ಸೈಬರ್ ಅಪರಾಧಿಗಳ ಬೆದರಿಕೆಯನ್ನು ಹೇಗೆ ಎದುರಿಸಲು ನಮ್ಮಿಂದ ಸಾಧ್ಯ ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಕೆ ವಿನಾಯಕರಾವ್ ,ಕನ್ಯಾಡಿ ಸೇವಾಭಾರತಿ (ರಿ.)POSH ಕಮಿಟಿ ಅಧ್ಯಕ್ಷರಾದ ಶ್ರೀಮತಿ ವಸಂತಿ ಗೌಡ, ಸೇವಾಭಾರತಿ ಸಂಸ್ಥೆಯ ಕಾರ್ಯದರ್ಶಿ ಶ್ರೀ ಬಾಲಕೃಷ್ಣ, ಫಲಾನುಭವಿಗಳು, ಸಿಬ್ಬಂದಿ ವರ್ಗದವರು ಹಾಗೂ ಆರೈಕೆದಾರರು ಉಪಸ್ಥಿತರಿದ್ದರು.

