ಬೆಳ್ತಂಗಡಿ: (ಜು.31) ಬಾರ್ಯ ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನ ಹಾಗೂ ಪರಿವಾರ ದೈವಗಳ ಆಡಳಿತ ಸೇವಾ ಟ್ರಸ್ಟ್ ಆಶ್ರಯದಲ್ಲಿರುವ ಶ್ರೀ ನಾಗಬನದಲ್ಲಿ ನಾಗರಪಂಚಮಿ ದಿನ ವಿಶೇಷ ಪೂಜೆಯನ್ನು ಟ್ರಸ್ಟಿನ ಅಧ್ಯಕ್ಷ, ದೈವಗಳ ಗುರಿಕಾರ ಭಾಸ್ಕರ ಬಾರ್ಯ ನೆರವೇರಿಸಿದರು.


ದೇವಸ್ಥಾನದ ಅರ್ಚಕರಾದ ಗುರುಪ್ರಸಾದ್ ನೂರಿತ್ತಾಯ, ಟ್ರಸ್ಟಿನ ಕಾರ್ಯದರ್ಶಿ ಪ್ರಶಾಂತ ಪೈ, ಉಪಾಧ್ಯಕ್ಷ ನಾರಾಯಣಗೌಡ, ರಾಜೇಶ್ ಬಾರ್ಯ, ಶಿವರಾಮ ನಾಯ್ಕ್, ವಿದ್ಯಾ ಪ್ರಭಾಕರ, ಜಯಲಕ್ಷ್ಮಿ ರೈ, ನವೀನ್ ಬಾರ್ಯ ಮತ್ತು ಭಕ್ತಾದಿಗಳು ಪೂಜೆಯಲ್ಲಿ ಪಾಲ್ಗೊಂಡಿದ್ದರು.

