ಬಂಟ್ವಾಳ:(ಆ.1) ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಕಡೇಶಿವಾಲಯ ನಿವಾಸಿ ಹೇಮಂತ್ ಎಂಬ ಯುವಕನ ಮೃತದೇಹ ನದಿಯಲ್ಲಿ ಪತ್ತೆಯಾಗಿದೆ.

ಹೇಮಂತ್ (21) ಕೆಲಸಕ್ಕೆ ಹೋದವರು ಬಳಿಕ ಬಾರದೆ ನಾಪತ್ತೆಯಾಗಿದ್ದ. ಆತನ ದ್ವಿಚಕ್ರ ವಾಹನ ಬಂಟ್ವಾಳದ ಜಕ್ರಿಬೆಟ್ಟು ನೇತ್ರಾವತಿ ನದಿಯ ಬದಿಯಲ್ಲಿ ಪತ್ತೆಯಾಗಿತ್ತು.
ಆ ಪ್ರಕಾರ ಪೊಲೀಸ್ ಇಲಾಖೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ನದಿಯಲ್ಲಿ ಶೋಧ ಕಾರ್ಯ ಆರಂಭಿಸಿದ್ದರು.
ಮೂರನೇ ದಿನ ಆತನ ಮೃತದೇಹ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.


