Sat. Aug 2nd, 2025

ಮುಂಡಾಜೆ: ವಿಶ್ವ ಸ್ಕಾರ್ಫ್ ದಿನಾಚರಣೆ

ಮುಂಡಾಜೆ:(ಆ.೧) ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ.) ಇದರ ಅಧೀನಕ್ಕೊಳಪಟ್ಟ ಮುಂಡಾಜೆ ಪದವಿ ಪೂರ್ವ ಕಾಲೇಜು ಹಾಗೂ ಸರಸ್ವತಿ ಆಂಗ್ಲ ಮಾಧ್ಯಮ ಶಾಲೆ ಮುಂಡಾಜೆ ಇಲ್ಲಿನ ಕಬ್ಸ್ – ಬುಲ್ ಬುಲ್, ಸ್ಕೌಟ್ – ಗೈಡ್ಸ್, ರೋವರ್ಸ್‌ ಮತ್ತು ರೇಂಜರ್ಸ್ ವಿಭಾಗಗಳ ಸಹಯೋಗದಲ್ಲಿ ವಿಶ್ವ ಸ್ಕಾರ್ಫ್ ದಿನಾಚರಣೆಯನ್ನು ಆಚರಿಸಲಾಯಿತು.

ಇದನ್ನೂ ಓದಿ: 🟠ಬೆಳ್ತಂಗಡಿ: ಎಸ್.ಡಿ.ಎಮ್ ಬೆಳ್ತಂಗಡಿಯಲ್ಲಿ ಸ್ಕೌಟ್ ಗೈಡ್ಸ್ ವಿಶ್ವ ಸ್ಕಾರ್ಪ್ ದಿನಾಚರಣೆ ಹಾಗೂ ಸನ್ ರೈಸ್ ದಿನಾಚರಣೆ


ರೋವರ್ ಸ್ಕೌಟ್ ಲೀಡರ್ ಕೃಷ್ಣ ಕಿರಣ್ ಕೆ ಇವರು ಸ್ಕಾರ್ಫ್ ನ ಮಹತ್ವ, ಉಪಯೋಗಳು ಹಾಗೂ ವಿಶ್ವ ಸ್ಕಾರ್ಫ್ ದಿನಾಚರಣೆಯ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು.


ರೇಂಜರ್ ಲೀಡರ್ ವಸಂತಿ ಇವರು ಅತಿಥಿಗಳಿಗೆ ಸ್ಕಾರ್ಫ್ ನ್ನು ತೊಡಿಸುವ ಮೂಲಕ ವಿನೂತನ ರೀತಿಯಲ್ಲಿ ಕಾರ್ಯಕ್ರಮವನ್ನು ಆಚರಿಸಲಾಯಿತು ಹಾಗೂ ರೋವರ್ಸ್ ರೇಂಜರ್ಸ್ ವಿಭಾಗದ ನೂತನ ಸ್ಕಾರ್ಫ್ ನ್ನು ಬಿಡುಗಡೆಗೊಳಿಸಲಾಯಿತು.
ಸರಸ್ವತಿ ಆಂಗ್ಲ ಮಾಧ್ಯಮ ಶಾಲೆ ಮುಂಡಾಜೆಯ ಮುಖ್ಯೋಪಾಧ್ಯಾಯಿನಿ ಚಂದ್ರಮತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಹಾಗೂ ಸರಸ್ವತಿ ಪ್ರಾಥಮಿಕ ಶಾಲೆಯ ಹಿರಿಯ ಶಿಕ್ಷಕಿ ಶ್ರೀಜಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


ರೇಂಜರ್ ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ರೇಂಜರ್ ವಿದ್ಯಾರ್ಥಿಗಳಾದ ಮೋಕ್ಷಿತಾ ನಿರೂಪಿಸಿ, ಹೊಂಗಿರಣ ಸ್ವಾಗತಿಸಿ, ಜಲಜಾಕ್ಷಿ ಧನ್ಯವಾದಗೈದರು. ಗೈಡ್ ಕ್ಯಾಪ್ಟನ್ ರೇವತಿ, ಕಬ್ ಮಾಸ್ಟರ್ ಪ್ರೇಮಾ, ಫ್ಲಾಕ್ ಲೀಡರ್ ಭಾರತಿ ಸಹಕರಿಸಿದರು.

Leave a Reply

Your email address will not be published. Required fields are marked *