Sat. Aug 2nd, 2025

Belthangady: ಎಸ್.ಡಿ.ಎಮ್ ಬೆಳ್ತಂಗಡಿಯಲ್ಲಿ ಸ್ಕೌಟ್ ಗೈಡ್ಸ್ ವಿಶ್ವ ಸ್ಕಾರ್ಪ್ ದಿನಾಚರಣೆ ಹಾಗೂ ಸನ್ ರೈಸ್ ದಿನಾಚರಣೆ

ಬೆಳ್ತಂಗಡಿ:(ಆ.1) ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ, ಬೆಳ್ತಂಗಡಿಯಲ್ಲಿ ಸ್ಕೌಟ್ ಗೈಡ್ಸ್ ವಿಶ್ವ ಸ್ಕಾರ್ಪ್ ದಿನಾಚರಣೆ ಹಾಗೂ ಸನ್ ರೈಸ್ ದಿನಾಚರಣೆಯನ್ನು ಆಚರಿಸಲಾಯಿತು.

ಇದನ್ನೂ ಓದಿ: 🔴ಮಚ್ಚಿನ : ಶ್ರೀ ಕ್ಷೇ.ಧ.ಗ್ರಾ.ಯೋ. ಬಿ.ಸಿ. ಟ್ರಸ್ಟ್ ಗುರುವಾಯನಕೆರೆ ಸಹಕಾರದೊಂದಿಗೆ 1250 ಬಿದಿರು ಗಿಡ ವಿತರಣೆ ಕಾರ್ಯಕ್ರಮ

ಮುಖ್ಯ ಅತಿಥಿಯಾಗಿ ಬಿ ಸೋಮಶೇಖರ್ ಶೆಟ್ಟಿ ಜಿಲ್ಲಾ ಸಹಾಯಕ ಆಯುಕ್ತರು ಆಗಮಿಸಿದ್ದರು. ಸ್ಕೌಟ್ ಗೈಡ್ಸ್ ಸ್ಕಾರ್ಫ್ ತೊಡಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದ ಮುಖ್ಯ ಅತಿಥಿಗಳು ಸ್ಕೌಟ್ ಗೈಡ್ಸ್ ಸಮಾಜದಲ್ಲಿ ಮಕ್ಕಳ ಬೆಳವಣಿಗೆಗೆ ಸಹಕಾರಿಯಾಗಿದೆ ಶಿಸ್ತು, ಜವಾಬ್ದಾರಿಯುತ ಕಾರ್ಯ, ನಾಯಕತ್ವ ಗುಣ ಮಕ್ಕಳಲ್ಲಿ ಬೆಳೆಯಬೇಕು ಸಮಾಜದಲ್ಲಿ ವಿದ್ಯಾರ್ಥಿಗಳು ಯಾವ ರೀತಿ ಬಾಳಬೇಕು ಎಂಬುದನ್ನು ಸ್ಕೌಟ್ ಗೈಡ್ಸ್ ನಿಂದ ಕಲಿಯಬಹುದು ಎಂದು ತಿಳಿಸಿದರು.


ಮಕ್ಕಳು ಸ್ಕೌಟ್ ಗೈಡ್ ನಿಂದ ಪಡೆದ ಅನುಭವ , ಸ್ಕೌಟ್ ಗೈಡ್ ನೊಂದಿಗೆ ತನ್ನ ಪ್ರಯಾಣ ಇದರ ಬಗ್ಗೆ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಸ್ಕೌಟ್ಸ್ ಗೈಡ್ಸ್ ಪ್ರತಿಜ್ಞೆಯನ್ನು ಪುನರ್ ಉಚ್ಚರಿಸಿದರು. ಕಿರು ನಾಟಕದ ಮೂಲಕ ಹಿರಿಯರಿಗೆ ಸಹಾಯ ಮಾಡುವ ಸಮುದಾಯ ಚಟುವಟಿಕೆಯ ಬಗ್ಗೆ ಮನವರಿಕೆ ಮಾಡಲಾಯಿತು.


ವೇದಿಕೆಯಲ್ಲಿ ಮುಖ್ಯ ಶಿಕ್ಷಕಿ ಹೇಮಲತಾ ಎಂ ಆರ್ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಬೆಳ್ತಂಗಡಿಯ ಕಾರ್ಯದರ್ಶಿ ಪ್ರಮೀಳಾ ಪೂಜಾರಿ ಉಪಸ್ಥಿತರಿದ್ದರು.

ಪ್ರಮೀಳಾ ಪೂಜಾರಿ ಸಂಘಟಿಸಿದ ಕಾರ್ಯಕ್ರಮದಲ್ಲಿ  ಗೈಡ್ ವಿದ್ಯಾರ್ಥಿ ಪ್ರಾಪ್ತಿ ವಿ  ಶೆಟ್ಟಿ ನಿರೂಪಿಸಿ, ಗೈಡ್ ವಿದ್ಯಾರ್ಥಿ ಸಂಜನಾ ಸ್ವಾಗತಿಸಿ, ಗೈಡ್ ವಿದ್ಯಾರ್ಥಿ ಪರಿಣಿತ ಧನ್ಯವಾದವಿತ್ತರು. ಸ್ಕೌಟ್ ಗೈಡ್ ಶಿಕ್ಷಕರುಗಳಾದ ನೀತಾ  ಕೆ ಎಸ್ ,ಕಾರುಣ್ಯ, ಗೀತ  ಪಿ, ಜಯಲಕ್ಷ್ಮಿ, ಮಂಜುನಾಥ, ಜಯರಾಮ್ ,ರಮ್ಯಾ ,ಪ್ರಮೀಳಾ ಎನ್ ಸಹಕರಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Leave a Reply

Your email address will not be published. Required fields are marked *