Sat. Aug 2nd, 2025

ಬೆಳ್ತಂಗಡಿ: ಬೆಳ್ತಂಗಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜೋಕುಲೆನ ಆಟಿ ದಿನ

ಬೆಳ್ತಂಗಡಿ:(ಆ.2) ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯಲ್ಲಿ ಜೋಕುಲೆನ ಆಟಿ ದಿನವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.

ಇದನ್ನೂ ಓದಿ: ♟ಧರ್ಮಸ್ಥಳ: ಬೆಳ್ತಂಗಡಿ ತಾಲೂಕು ಮಟ್ಟದ ಚೆಸ್ ಪಂದ್ಯಾಟ

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾರ್ಥಿನಿಯಾದ ಪ್ರಾಪ್ತಿ 10ನೇ , ಅತಿಥಿ ಸ್ಥಾನವನ್ನು ಶ್ರೀ ವಿನೀತ್ ಹತ್ತನೇ ಮತ್ತು ಮುಖ್ಯ ಅತಿಥಿ ಸ್ಥಾನವನ್ನು ಸಂಜನ 9ನೇ ತರಗತಿ ಇವರು ವಹಿಸಿಕೊಂಡರು. ಮುಖ್ಯ ಶಿಕ್ಷಕಿ ಶ್ರೀಮತಿ ಹೇಮಲತಾ ಎಂ ಆರ್, ಅಧ್ಯಕ್ಷರು ಮತ್ತು ಅತಿಥಿಗಳು ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಚೆನ್ನೆಮಣೆ ಆಟವನ್ನು ಆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು.ತುಳುನಾಡಿನ ವೈಶಿಷ್ಟ್ಯತೆಗಳನ್ನು ಬಹಳ ಸವಿಸ್ತಾರವಾಗಿ ಎಲ್ಲರ ಮನಮುಟ್ಟುವಂತೆ ಮುಖ್ಯ ಅತಿಥಿಗಳು ತಮ್ಮ ಭಾಷಣದ ಮೂಲಕ ವ್ಯಕ್ತಪಡಿಸಿದರು. ಅತಿಥಿಗಳು ಮತ್ತು ಅಧ್ಯಕ್ಷರು ತಮ್ಮ ಭಾಷಣದ ಮೂಲಕ ಆಟಿಗೆ ಸಂಬಂಧಿಸಿದ ತಮ್ಮ ಅನುಭವಗಳನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮದ ನಿರೂಪಣೆಯನ್ನು ವಿದ್ಯಾರ್ಥಿಗಳಾದ ಯಶ್ವಿತಾ, ಸ್ವಾಗತ ಭಾಷಣವನ್ನು ಪ್ರಶ್ಯ ಮತ್ತು ವಂದನಾರ್ಪಣೆಯನ್ನು ಸ್ಪಂದನ್ ಇವರು ನೆರವೇರಿಸಿದರು. ಶಾಲಾ ಮಕ್ಕಳಿಂದ ತುಳು ನಾಡಿನ ಸಂಸ್ಕೃತಿಗಳನ್ನು ಬಿಂಬಿಸುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು. ವಿವಿಧ ರೀತಿಯ ತಿಂಡಿ ತಿನಿಸುಗಳನ್ನು ಪರಿಚಯಿಸಿ ಹಂಚಲಾಯಿತು. ಆಟಿಗೆ ಸಂಬಂಧಿಸಿದ ವಿವಿಧ ರೀತಿಯ ಬಿತ್ತಿ ಪತ್ರಿಕೆಗಳನ್ನು ಮಕ್ಕಳಿಂದ ತಯಾರಿಸಲಾಯಿತು. ಚೆನ್ನೆ ಮಣೆ ಆಟವನ್ನು ಪರಿಚಯಿಸಿ ಮಕ್ಕಳಿಂದ ಆಡಿಸಲಾಯಿತು. ಶಾಲಾ ಎಲ್ಲಾ ಮಕ್ಕಳು, ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Leave a Reply

Your email address will not be published. Required fields are marked *