ಬೆಂಗಳೂರು:(ಆ.3) ನಗರದ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿನಿ ಮೇಲೆ ಪಿಜಿ ಮಾಲೀಕನಿಂದ ಅತ್ಯಾಚಾರವೆಸಗಿರುವಂತಹ ಘಟನೆ ನಡೆದಿದೆ. ಪಿಜಿ ಮಾಲೀಕ ಅಶ್ರಫ್‌ನಿಂದ ಕೃತ್ಯವೆಸಗಲಾಗಿದೆ.

ಇದನ್ನೂ ಓದಿ: 🟠ಮೊಗ್ರು : ಅಲೆಕ್ಕಿ ಶ್ರೀರಾಮ ಶಿಶು ಮಂದಿರದ ಮಕ್ಕಳ ಅನ್ನಯಜ್ಞಕ್ಕೆ
ಈ ಸಂಬಂಧ ಸೋಲದೇವನಹಳ್ಳಿ ಠಾಣೆಗೆ ವಿದ್ಯಾರ್ಥಿನಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ಅಶ್ರಫ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಸೋಲದೇವನಹಳ್ಳಿಯಲ್ಲಿರುವ ಪಿಜಿ ಒಂದಕ್ಕೆ ವಿದ್ಯಾರ್ಥಿನಿ ಸೇರಿ ಕೇವಲ 10 ದಿನ ಆಗಿತ್ತು. ಶನಿವಾರ ತಡರಾತ್ರಿ ಕಾರಿನಲ್ಲಿ ವಿದ್ಯಾರ್ಥಿನಿಯನ್ನು ಪಿಜಿ ಮಾಲೀಕ ಅಶ್ರಫ್ ನಿರ್ಜನ ಪ್ರದೇಶಕ್ಕೆ ಹೊತ್ತೊಯ್ದು ಅತ್ಯಾಚಾರವೆಸಗಿದ್ದಾನೆ.


