Mon. Aug 4th, 2025

ಉಜಿರೆ:‌ ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಯಶಸ್ವಿ ಎಂಡೋಸ್ಕೋಪಿಕ್ ಸರ್ವಿಕಲ್ ಸ್ಪೈನ್ ಸರ್ಜರಿ

ಉಜಿರೆ:(ಆ.4) ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕುತ್ತಿಗೆ ನೋವಿನಿಂದ ಬಳಲುತ್ತಿದ್ದ 46 ವರ್ಷ ಪ್ರಾಯದ ರೋಗಿಯೊಬ್ಬರಿಗೆ ಎಂಡೋಸ್ಕೋಪಿಕ್ ಸರ್ವಿಕಲ್ ಸ್ಪೈನ್ ಸರ್ಜರಿಯನ್ನು ಯಶಸ್ವಿಯಾಗಿ ನಡೆಸಲಾಗಿದೆ. ಬೆನ್ನು ಮೂಳೆ ಶಸ್ತ್ರಚಿಕಿತ್ಸಾ ತಜ್ಞರಾದ ಡಾ| ಮಹೇಶ್. ಕೆ, ಮೂಳೆ ಶಸ್ತ್ರಚಿಕಿತ್ಸಾ ವೈದ್ಯರಾದ ಡಾ|ಶತಾನಂದ ಪ್ರಸಾದ್ ರಾವ್ ಮತ್ತು ಅರೆವಳಿಕೆ ತಜ್ಞರಾದ ಡಾ| ಚೈತ್ರಾ. ಆರ್ ಇವರ ತಂಡ ಯಶಸ್ವಿಯಾಗಿ ಈ ಶಸ್ತ್ರಚಿಕಿತ್ಸಾ ನಡೆಸಿದ್ದಾರೆ.

ಇದನ್ನೂ ಓದಿ: 🔴ಉಜಿರೆ: ಉಜಿರೆಯ ಶ್ರೀ ಧ. ಮಂ. ಕಾಲೇಜಿನಲ್ಲಿ “ಆಕಾಶಕ್ಕೆ ಏಣಿ ಹಾಕಿ” ವಿಶೇಷ ಸಂವಾದ ಕಾರ್ಯಕ್ರಮ

ಸರ್ಜರಿ ಬಳಿಕ ರೋಗಿಯಲ್ಲಿ ಕುತ್ತಿಗೆ ನೋವು ನಿವಾರಣೆಯಾಗಿದೆ ಮತ್ತು ರೋಗಿಯ ಆರೋಗ್ಯದಲ್ಲಿ ಚೇತರಿಕೆಯಾಗಿದೆ ಎಂದು ಸರ್ಜರಿ ನಡೆಸಿದ ಮೂಳೆ ಶಸ್ತ್ರಚಿಕಿತ್ಸಾ ಡಾ| ಶತಾನಂದ ಪ್ರಸಾದ್ ರಾವ್ ತಿಳಿಸಿದ್ದಾರೆ.

ಏನಿದು ಎಂಡೋಸ್ಕೋಪಿಕ್ ಸರ್ವಿಕಲ್ ಸ್ಪೈನ್ ಸರ್ಜರಿ?
ಎಂಡೋಸ್ಕೋಪಿಕ್ ಸರ್ವಿಕಲ್ ಸ್ಪೈನ್ ಸರ್ಜರಿ ಎನ್ನುವುದು ಕುತ್ತಿಗೆಯ ಮೇಲೆ ಪರಿಣಾಮ ಬೀರುವ ವಿವಿಧ ಪರಿಸ್ಥಿತಿಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುವ ಕನಿಷ್ಠ ಆಕ್ರಮಣಕಾರಿ ಶಸ್ತ್ರಚಿಕಿತ್ಸಾ ವಿಧಾನವಾಗಿದೆ. ಈ ಶಸ್ತ್ರಚಿಕಿತ್ಸಾ ವಿಧಾನದಲ್ಲಿ ಅತೀ ಸಣ್ಣ ಛೇದನದೊಂದಿಗೆ ಶಸ್ತ್ರಚಿಕಿತ್ಸಾ ನಡೆಸಲಾಗುವುದರಿಂದ ಅತೀ
ಕಡಿಮೆ ಅಂಗಾಂಶಗಳ ಹಾನಿ, ಶೀಘ್ರ ಚೇತರಿಕೆ, ಕಡಿಮೆ ನೋವು, ಅತೀ ಕಡಿಮೆ ರಕ್ತದ ನಷ್ಟ ಮತ್ತು ಸೋಂಕಿನ ಅಪಾಯವೂ ಕೂಡ ಕಡಿಮೆಯಾಗಿರುತ್ತದೆ.

ಉಜಿರೆಯ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ವೈದ್ಯಕೀಯ ಸೇವೆ ನೀಡುವುದರೊಂದಿಗೆ ಸಂಕೀರ್ಣವಾದ
ಶಸ್ತ್ರಚಿಕಿತ್ಸೆಗಳನ್ನು ಕೂಡ ಯಶಸ್ವಿಯಾಗಿ ನಡೆಸಲಾಗುತ್ತಿದೆ. ಇಲ್ಲಿ ನಡೆಯುತ್ತಿರುವ ಯಶಸ್ವಿ ಶಸ್ತ್ರಚಿಕಿತ್ಸೆಗಳ ಬಗ್ಗೆ ಡಾ| ಡಿ. ವೀರೇಂದ್ರ ಹೆಗ್ಗಡೆ, ಹೇಮಾವತಿ ವಿ.ಹೆಗ್ಗಡೆಯವರು ಹಾಗೂ ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು ಎಂದು ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *