Mon. Aug 4th, 2025

Belthangady: ಅಕ್ರಮವಾಗಿ ಗಾಂಜಾ ದಾಸ್ತಾನು – ಆರೋಪಿ ಪರಾರಿ

ಬೆಳ್ತಂಗಡಿ :(ಆ.4) ಅಕ್ರಮವಾಗಿ ಮನೆಯೊಳಗೆ ದಾಸ್ತಾನು ಇರಿಸಿದ್ದ ಗಾಂಜಾವನ್ನು ಪುಂಜಾಲಕಟ್ಟೆ ಪೊಲೀಸರು ದಾಳಿ ಮಾಡಿ ಶೇಖರಿಸಿಟ್ಟ ಗಾಂಜಾವನ್ನು ಪತ್ತೆಹಚ್ಚಿ ಹಚ್ಚಿದ್ದು. ದಾಳಿ ವೇಳೆ ಆರೋಪಿ ಪರಾರಿಯಾಗಿದ್ದಾನೆ. ಹೆಚ್ಚಿನ ತನಿಖೆಗಾಗಿ ಬೆಳ್ತಂಗಡಿ ಪೊಲೀಸರಿಗೆ ಪ್ರಕರಣ ಹಸ್ತಾಂತರಿಸಿದ್ದಾರೆ.

ಇದನ್ನೂ ಓದಿ: 🎀ಮಂಗಳೂರು: ಬೈಂದೂರಿನಲ್ಲಿ ಎಂ.ಸಿ.ಸಿ. ಬ್ಯಾಂಕಿನ 20ನೇ ಶಾಖೆ ಉದ್ಘಾಟನೆ


ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಮದ್ದಡ್ಕ ಚಿಲಿಂಬಿ ಎಂಬಲ್ಲಿ ರಫೀಕ್ ಎಂಬಾತನ ಮನೆಯೊಳಗೆ 160 ಗ್ರಾಂ ಗಾಂಜಾ ಶೇಖರಿಸಿಟ್ಟ ಬಗ್ಗೆ ಪುಂಜಾಲಕಟ್ಟೆ ಪಿಎಸ್‌ಐ ಗೆ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಗಾಂಜಾ ವಶಕ್ಕೆ ಪಡೆದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕಲಂ- 8C,20B NDPS Act ಅಡಿಯಲ್ಲಿ ಆರೋಪಿ ರಫೀಕ್ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿ ರಫೀಕ್ ವಿರುದ್ಧ ಈ ಹಿಂದೆ ಹಲವು ಗಾಂಜಾ ಪ್ರಕರಣ ದಾಖಲಾಗಿದೆ.

ಆಗಸ್ಟ್ 03 ರಂದು 06:45 ಗಂಟೆಗೆ ಪುಂಜಾಲಕಟ್ಟೆ ಪಿಎಸ್‌ಐ ರಾಜೇಶ್.ಕೆ.ವಿ ಸಿಬ್ಬಂದಿಗಳೊಂದಿಗೆ ಪಣಕಜೆ ಎಂಬಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ದೊರೆತ ಖಚಿತ ಮಾಹಿತಿಯಂತೆ ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮದ ಮದ್ದಡ್ಕ ಚಿಲಿಂಬಿ ಎಂಬಲ್ಲಿ ನಿರ್ಮಾಣ ಹಂತದ ಛಾವಣಿ ಇಲ್ಲದ ಕಟ್ಟಡದೊಳಗಡೆ ರಫೀಕ್ ಎಂಬಾತನು ಅಕ್ರಮವಾಗಿ ಸುಮಾರು ರೂ.15,000 ಮೌಲ್ಯದ ಒಟ್ಟು 160 ಗ್ರಾಂ ತೂಕದ ಗಾಂಜಾದ ಎಲೆ ಮೊಗ್ಗು, ಬೀಜವನ್ನು ತಂದಿಟ್ಟಿದ್ದನ್ನು ಮಾನ್ಯ ತಹಶೀಲ್ದಾರರು ಬೆಳ್ತಂಗಡಿ ಹಾಗೂ ಪಂಚರ ಸಮಕ್ಷಮ ವಿವರವಾದ ಮಹಜರು ನಡೆಸಿ ವಶಪಡಿಸಿಕೊಂಡು ಬೆಳ್ತಂಗಡಿ ಠಾಣಾ ಸರಹದ್ದಿನ ಆಧಾರದಲ್ಲಿ ಮಹಜರು ಹಾಗೂ ವರದಿಯನ್ನು ಮುಂದಿನ ಕ್ರಮದ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *