ವೇಣೂರು:(ಆ.4) ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲಾ- ಕಾಲೇಜು ನಿಟ್ಟಡೆ ವೇಣೂರು ಇಲ್ಲಿನ 2025-26 ನೇ ಸಾಲಿನ ಪೂರ್ವ ಪ್ರಾಥಮಿಕ ,ಪ್ರಾಥಮಿಕ ಪ್ರೌಢಶಾಲಾ, ಕಾಲೇಜು ಇದರ ಶಿಕ್ಷಕ ಶಿಕ್ಷಕ ರಕ್ಷಕ ಸಂಘದ ಸಭೆಯು ದಿನಾಂಕ 02-08-2025 ರಂದು ನಡೆಯಿತು.ಈ ಸಭೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಇದನ್ನೂ ಓದಿ: ⭕ಅನ್ಯಧರ್ಮೀಯ ಹುಡ್ಗಿ ಜತೆ ಲವ್
ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ನೂತನ ಅಧ್ಯಕ್ಷರಾಗಿ ಶ್ರೀ ಗೋಪಾಲ ಶೆಟ್ಟಿ ಇವರು ಆಯ್ಕೆಯಾದರು.ಶಾಲಾ ಶಿಕ್ಷಕ ರಕ್ಷಕ ಸಂಘದ ನೂತನ ಅಧ್ಯಕ್ಷರಾಗಿ ಶ್ರಿ ಚಂದ್ರಶೇಖರ ಇವರು ಆಯ್ಕೆಗೊಂಡರು.
ಅದೇ ರೀತಿ ಉಪಾಧ್ಯಕ್ಷರು,ಸದಸ್ಯರನ್ನು ಆಯ್ಕೆ ಮಾಡಲಾಯಿತು.ಈ ಸಭೆಯಲ್ಲಿ ನಮ್ಮ ಶಾಲಾ ವಿದ್ಯಾರ್ಥಿ ಗಳಿಗೆ ಪೀಠೋಪಕರಣ ನೀಡಿ
ಸಹಕರಿಸಿದ ಶ್ರೀ ಚಂದ್ರ ಶೇಖರ ಇವರಿಗೆ ಗೌರವಿಸಲಾಯಿತು.ಈ ಸಭೆಯಲ್ಲಿ ರಷ್ಯಾದಲ್ಲಿ ಎಂ ಬಿ ಬಿ ಎಸ್ ಮಾಡುತ್ತಿರುವ ನಮ್ಮ ಶಾಲಾ ಹಳೆ
ವಿದ್ಯಾರ್ಥಿಯಾದ ಶ್ರಿ ಪೂಜಿತ್ ಕುಲಾಲ್ ಇವರು ಮಕ್ಕಳಿಗೆ ಮೊಬೈಲ್ ನೀಡದೆ ಅವರ ಉತ್ತಮ ಭವಿಷ್ಯ ವನ್ನು ರೂಪಿಸಿಕೊಳ್ಳಲು ಅವಕಾಶ ಮಾಡಿಕೊಡಿ ಎಂದು ಪೋಷಕರಿಗೆ ಕಿವಿ ಮಾತು ನೀಡಿದರು.

ಅದೇ ರೀತಿ ಈ ಸಭೆಯ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿರುವ ನಮ್ಮ ಶಾಲಾ ಸಂಸ್ಥಾಪಕರಾದ ಗಿರೀಶ್ ಕೆ ಹೆಚ್ ಇವರು ಕುಂಭಶ್ರೀಯು ಇಷ್ಟು ಎತ್ತರಕ್ಕೆ ಬೆಳೆಯಬೇಕಾದರೆ ಪೋಷಕರ ಸಹಕಾರವೇ ಕಾರಣ ಎಂದರು. ಈ ಸಭೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಓಮನ, ಮಾಜಿ ಶಿಕ್ಷಕ – ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀಮತಿ ಸುಜಾತ ,ಕುಂಭಶ್ರೀ ವೈಭವ ಸಮಿತಿಯ ಅಧ್ಯಕ್ಷರಾದ ಶ್ರೀ ಹರೀಶ್ ಪೊಕ್ಕಿ,ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಶ್ರೀಮತಿ ಮಮತಾ ಶಾಂತಿ , ಪ್ರಾಥಮಿಕ ವಿಭಾಗದ ಶ್ರೀಮತಿ ಶುಭ , ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಶೋಭಾ ಎಲ್. ಎನ್. ರಾವ್ ಹಾಗೂ ಎಲ್ಲಾ ಶಿಕ್ಷಕ ವೃಂದದವರು ಮತ್ತು ಪೋಷಕರು ಉಪಸ್ಥಿತರಿದ್ದರು.

ಪ್ರಾಥಮಿಕ ವಿಭಾಗದ ಶಿಕ್ಷಕಿ ಶ್ರೀಮತಿ ಭವಾನಿ ದಿವ್ಯ ಮತ್ತು ಪ್ರೌಢಶಾಲಾ ವಿಭಾಗದ ಶಿಕ್ಷಕ ಶ್ರೀ ಸುಮನ್ ನಿರೂಪಿಸಿ, ಪ್ರೌಢಶಾಲಾ ವಿಭಾಗದ ಶಿಕ್ಷಕಿ ಶ್ರೀಮತಿ ಅಕ್ಷತ ಸ್ವಾಗತಿಸಿ, ಪ್ರಾಥಮಿಕ ವಿಭಾಗದ ಶಿಕ್ಷಕಿ ಶ್ವೇತ ಬಿ ವಂದಿಸಿದರು.
