ಉಜಿರೆ:(ಆ.5) ಅನುಗ್ರಹ ಆಂಗ್ಲ ಮಾಧ್ಯಮ ಶಾಲೆ, ಉಜಿರೆಯಲ್ಲಿ ದಿನಾಂಕ 02/08/2025 ರಂದು ಪೂರ್ವಪ್ರಾಥಮಿಕ ವಿದ್ಯಾರ್ಥಿಗಳ ಪೋಷಕರ ಸಭೆಯು ಅನುಗ್ರಹ ಶಾಲಾ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರಾದ ಫಾದರ್ ಅಬೆಲ್ ಲೋಬೋ ಅವರು ವಹಿಸಿದ್ದರು. ಪ್ರಾಂಶುಪಾಲರಾದ ಫಾದರ್ ವಿಜಯ್ ಲೋಬೊ, ಹಾಗೂ, ಶಿಕ್ಷಕಿ ಗ್ರೇಸಿ ಸಾಲ್ದಾನ ಅವರು ಉಪಸ್ಥಿತರಿದ್ದರು. ಪ್ರಾರ್ಥನೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಮಕ್ಕಳ ಪಠ್ಯ – ಪಠ್ಯೇತರ ಚಟುವಟಿಕೆಗಳ ಬಗ್ಗೆ ತರಗತಿಯ ಶಿಕ್ಷಕಿಯರಾದಂತಹ ಗೀತಾ, ವಿನ್ನಿ ,ಹಾಗೂ ಅಕ್ಷತರವರು ವಿವರಿಸಿದರು.
ಹಾಗೇ ಶಾಲಾ ಪ್ರಾಂಶುಪಾಲರಾದ ಫಾದರ್ ವಿಜಯ್ ಲೋಬೊರವರು ಪೋಷಕರಿಗೆ ಪಠ್ಯೇತರ ಚಟುವಟಿಕೆಗಳ ಬಗ್ಗೆ ಹಾಗೂ ಪೋಷಕರು ಮಾಡಬೇಕಾದ ಕೆಲವು ಜವಾಬ್ದಾರಿಗಳನ್ನು ತಿಳಿಸಿಕೊಟ್ಟರು. ಪೋಷಕರ ಅನಿಸಿಕೆ ಸಲಹೆ ಸೂಚನೆಯನ್ನು ಕೇಳಲಾಯಿತು. ಶಿಕ್ಷಕಿ ಅಕ್ಷತಾ ಕರ‍್ಯಕ್ರಮವನ್ನು ನಿರೂಪಿಸಿ ಗ್ರೇಸಿ ಸಲ್ದಾನ ವಂದಿಸಿದರು. ಶಿಕ್ಷಕಿ ಪ್ರಣಿತಾ ಡಿಸೋಜû ಸಹಕರಿಸಿದರು.

