ಉಜಿರೆ:(ಆ.5) ದಿನಾಂಕ 4. 8. 2025 ರಂದು ಉಜಿರೆಯ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 2024-25ನೇ ಸಾಲಿನ ವಲಯ ಮಟ್ಟದ ಪ್ರಾಥಮಿಕ ಶಾಲಾ ಬಾಲಕ ಬಾಲಕಿಯರ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಅನುಗ್ರಹ ಶಾಲೆಯ ಬಾಲಕ ಬಾಲಕಿಯರು ಪ್ರಥಮ ಸ್ಥಾನವನ್ನು ಗಳಿಸಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ: ⭕ಬೆಳ್ತಂಗಡಿ: ಜಾಂಡೀಸ್ ನಿಂದ ಮೇಲಂತಬೆಟ್ಟು ಯುವಕ ನಿಧನ
ಬಾಲಕರ ವಿಭಾಗದಲ್ಲಿ ಅಫನ್ ಶರಿಫ್, ವಿಶ್ವಾಸ್ ಶೆಟ್ಟಿ, ನಿಶಿತ್,ಅದ್ವಿತ್ ಸುವರ್ಣ, ಫೆಬಿನ್ ಫ್ರಾನ್ಸಿಸ್,ಬಾಲಕಿಯರ ವಿಭಾಗದಲ್ಲಿ ಅವಿಷ್ಕಾ, ಆದ್ಯ, ಪ್ರಾಪ್ತಿಶೆಟ್ಟಿ ಪ್ರಥಮ ಸ್ಥಾನವನ್ನು ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರಿಗೆ ದೈಹಿಕ ಶಿಕ್ಷಕರಾದ ನಿಶ್ಚಿತ್ ಇವರು ತರಬೇತಿ ನೀಡಿದ್ದು ವಿಜೇತ ಕ್ರೀಡಾಳುಗಳನ್ನು ಶಾಲಾ ಸಂಚಾಲಕರು,ಪ್ರಾಂಶುಪಾಲರು,ಶಿಕ್ಷಕರು ಅಭಿನಂದಿಸಿದ್ದಾರೆ.


