Tue. Aug 5th, 2025

ಉಪ್ಪಿನಂಗಡಿ: ವಿಶ್ವಕರ್ಮ ಸಮಾಜ ಸೇವಾ ಸಂಘ (ರಿ.)ಉಪ್ಪಿನಂಗಡಿ & ಚಿಂತನಗಂಗಾ ಮನವಳಿಕೆ ಇವುಗಳ ಜಂಟಿ ಆಶ್ರಯದಲ್ಲಿ 29 ನೇ ವರ್ಷದ ವಾರ್ಷಿಕ ಮಹಾಸಭೆ ಮತ್ತು ಶ್ರಾವಣ ವಿಶೇಷ ಕಾರ್ಯಕ್ರಮ

ಉಪ್ಪಿನಂಗಡಿ :(ಆ.5) ವಿಶ್ವಕರ್ಮ ಸಮಾಜ ಸೇವಾ ಸಂಘ (ರಿ.)ಉಪ್ಪಿನಂಗಡಿ ಹಾಗೂ ಚಿಂತನಗಂಗಾ ಮನವಳಿಕೆ ಇವುಗಳ ಜಂಟಿ ಆಶ್ರಯದಲ್ಲಿ ಆಗಸ್ಟ್ 03 ರಂದು ಉಪ್ಪಿನಂಗಡಿ ಸರ್ಕಾರಿ ಉನ್ನತ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 29 ನೇ ವರ್ಷದ ವಾರ್ಷಿಕ ಮಹಾಸಭೆ ಮತ್ತು ಶ್ರಾವಣ ವಿಶೇಷ ಕಾರ್ಯಕ್ರಮ ನೆರವೇರಿತು.

ಇದನ್ನೂ ಓದಿ: ಬೆಳಾಲು : ಬೆಳಾಲು ಶ್ರೀ ಧ.ಮಂ.ಅ.ಪ್ರೌಢ ಶಾಲೆಯಲ್ಲಿ ಆಟಿದ ಲೇಸು ಮತ್ತು ಅಭಿನಂದನಾ ಕಾರ್ಯಕ್ರಮ

ಸಂಘದ ಅಧ್ಯಕ್ಷರಾದ ಪುಳಿತ್ತಡಿ ಹರೀಶ್ ಆಚಾರ್ಯ ರವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ದ.ಕ. ಜಿಲ್ಲಾ ಚಿನ್ನದ ಕೆಲಸಗಾರರ ಸಂಘ (ರಿ.) ಮಂಗಳೂರು ಇದರ ಅಧ್ಯಕ್ಷರಾದ ಕೆ. ಎಲ್. ಹರೀಶ್. ಆಚಾರ್ಯ, ಹಾಗೂ ಉಪ್ಪಿನಂಗಡಿ ಕಾಳಿಕಾಂಬಾ ಮಹಿಳಾ ಸಂಘದ ಶ್ರೀಮತಿ ಸುಪ್ರಿಯ ರಮೇಶ್ ಆಚಾರ್ಯ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *