Tue. Aug 5th, 2025

ಬೆಳ್ತಂಗಡಿ: ಸಿಯೋನ್ ಆಶ್ರಮ ಟ್ರಸ್ಟ್ (ರಿ.), ಗಂಡಿಬಾಗಿಲು – “ಆಟಿಡೊಂಜಿ ದಿನ” ಸ್ನೇಹಭೋಜನ ಕೂಟ

ಬೆಳ್ತಂಗಡಿ: (ಆ.5)ಸಿಯೋನ್ ಆಶ್ರಮ ಟ್ರಸ್ಟ್ (ರಿ.) ಗಂಡಿಬಾಗಿಲು ಇಲ್ಲಿ ದಿನಾಂಕ:05.08.2025ರಂದು ಆಟಿಡೊಂಜಿ ದಿನ ಸ್ನೇಹಭೋಜನ ಕೂಟವನ್ನು ಸಂಭ್ರಮದಿಂದ ಆಚರಿಸಲಾಯಿತು. ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿಯವರಾದ ಡಾ. ಯು.ಸಿ ಪೌಲೋಸ್ ರವರು ಮತ್ತು ಟ್ರಸ್ಟಿ ಸದಸ್ಯರಾದ ಶ್ರೀ ಮತಿ ಮೇರಿ ಯು ಪಿ ಯವರ ನೇತೃತ್ವದಲ್ಲಿ ಆಶ್ರಮ ನಿವಾಸಿಗಳಿಗಾಗಿ ಆಟಿ ತಿಂಗಳಿನಲ್ಲಿ ಸೇವಿಸುವ ವಿವಿಧ ಆಹಾರ ಪದಾರ್ಥಗಳನ್ನು ತಯಾರಿಸಲಾಯಿತು. ಸ್ನೇಹಭೋಜನ ಕೂಟವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು.

ಇದನ್ನೂ ಓದಿ: ⭕ಉಜಿರೆ: ನೇಣುಬಿಗಿದುಕೊಂಡು ಯುವಕ ಆತ್ಮಹತ್ಯೆ

ಸಂಸ್ಥೆಯ ವೈದ್ಯಾಧಿಕಾರಿಯವರಾದ ಶ್ರೀ ಯುತ ಡಾ. ಶಿವಾನಂದ ಸ್ವಾಮಿ ಯವರು ಆಟಿ ತಿಂಗಳ ಆಚರಣೆ ಮತ್ತು ಆಟಿ ತಿಂಗಳಿನಲ್ಲಿ ಸೇವಿಸುವ ಆಹಾರ ಪದಾರ್ಥಗಳ ಔಷಧೀಯ ಗುಣಗಳು, ಮತ್ತು ತುಳು ನಾಡಿನ ಸಂಸ್ಕೃತಿಯ ವೈಶಿಷ್ಟ್ಯತೆಗಳ ಕುರಿತು ಸಂಕ್ಷಿಪ್ತವಾಗಿ ಹಾಗೂ ಅರ್ಥಪೂರ್ಣವಾಗಿ ವಿವರಿಸಿದರು.

ಕಾರ್ಯಕ್ರಮದ ಕೊನೆಯಲ್ಲಿ ಆಶ್ರಮ ನಿವಾಸಿಗಳಿಗೆ ತಯಾರಿಸಲಾದ ವಿವಿಧ ಆಹಾರ ಪದಾರ್ಥಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತ ಮಂಡಳಿಯವರು, ಟ್ರಸ್ಟಿ ಸದಸ್ಯರು , ಸಿಬ್ಬಂದಿವರ್ಗದವರು ಮತ್ತು ಆಶ್ರಮ ನಿವಾಸಿಗಳು ಉಪಸ್ಥಿತರಿದ್ದು, ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಿದರು.

Leave a Reply

Your email address will not be published. Required fields are marked *