Tue. Aug 5th, 2025

Ujire: ಧರ್ಮ ಶಿಕ್ಷಣದಿಂದ ಧರ್ಮಾಭಿಮಾನ ಮತ್ತು ಈ ಧರ್ಮಾಭಿಮಾನದಿಂದಲೇ ವಿಶಾಲ ಹಿಂದೂ ಸಂಘಟನೆಯು ಸಾಧ್ಯ – ಶ್ರೀ ಚಂದ್ರ ಮೊಗೇರ್

ಉಜಿರೆ :(ಆ.5) ಹಿಂದೂ ಜನಜಾಗೃತಿ ಸಮಿತಿಯ ಶ್ರೀ ಚಂದ್ರ ಮೊಗೇರ್ ಇವರು ಮಾತನಾಡುತ್ತಾ ‘ಸದ್ಯದ ಕಾಲದಲ್ಲಿ ಹಿಂದೂಗಳ ಮೇಲೆ ಅನೇಕ ಪ್ರಕಾರದ ಆಘಾತಗಳಾಗುತ್ತಿವೆ. ಸಾಧನೆಯನ್ನು ಮಾಡಿದರೆ ನಮ್ಮ ಆತ್ಮಬಲವು ವೃದ್ಧಿಯಾಗಿ ಧರ್ಮದ ಮೇಲಾಗುತ್ತಿರುವ ಆಘಾತ, ಧರ್ಮಹಾನಿಯನ್ನು ತಡೆಗಟ್ಟಲು ಸಾಧ್ಯವಾಗುವುದು. ಹಿಂದೂಗಳು ಧರ್ಮಶಿಕ್ಷಣವನ್ನು ಪಡೆದು ಇತರರಲ್ಲಿಯೂ ಧರ್ಮಾಭಿಮಾನವನ್ನು ಬಿಂಬಿಸುವುದು ಕಾಲದ ಅವಶ್ಯಕತೆಯಾಗಿದೆ. ಧರ್ಮ ಶಿಕ್ಷಣದಿಂದ ಧರ್ಮಾಭಿಮಾನ ಮತ್ತು ಈ ಧರ್ಮಾಭಿಮಾನದಿಂದಲೇ ವಿಶಾಲ ಹಿಂದೂ ಸಂಘಟನೆಯಾಗಿ, ಹಿಂದುಗಳ ಒಳಿತನ್ನು ಮಾಡುವ ಹಿಂದೂ ರಾಷ್ಟ್ರದ ಸ್ಥಾಪನೆಯೂ ಸಾಧ್ಯ ‘ ಎಂದರು.

ಇದನ್ನೂ ಓದಿ: 🔴ಉಜಿರೆ: ಅನುಗ್ರಹದಲ್ಲಿ ಪೂರ್ವಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಪೋಷಕರ ಸಭೆ

ಉಜಿರೆಯ ಅರಿಪ್ಪಾಡಿ ಮಠದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಪ್ರವಚನವನ್ನು ಆಯೋಜಿಸಲಾಗಿತ್ತು.

ಸನಾತನ ಸಂಸ್ಥೆಯ ಧರ್ಮಪ್ರಚಾರಕ ಸಂತರಾದ ಶ್ರೀ ರಮಾನಂದ ಗೌಡ ಇವರ ಮಾರ್ಗದರ್ಶನ :

ಆತ್ಮ ಮತ್ತು ಪರಮಾತ್ಮನ ಸಂಬಂಧಕ್ಕಾಗಿ ಮಾಡುವ ನಿರಂತರ ಪ್ರಯತ್ನವೇ ಸಾಧನೆಯಾಗಿದೆ. ಭಗವಂತನಲ್ಲಿ ನಮ್ಮ ಇಚ್ಛೆ ಆಕಾಂಶೆಗಳನ್ನು ಪೂರೈಸಲು ಮಾಡುವ ಆರಾಧನೆಯನ್ನು ಸಕಾಮ ಸಾಧನೆ ಎಂದು ಹೇಳಲಾಗುತ್ತದೆ. ನಮ್ಮ ಸಾಧನೆ ಆಗಬೇಕಾದರೆ, ಭಗವಂತನಲ್ಲಿ ಏಕರೂಪವಾಗಲು ನಾವು ನಿಷ್ಕಾಮ ಕರ್ಮವನ್ನು ಮಾಡಬೇಕಾಗುತ್ತದೆ. ಹಿಂದಿನ ಕಾಲದಲ್ಲಿ ಗುರುಕುಲ ಶಿಕ್ಷಣದ ಮಾಧ್ಯಮದಿಂದ ಧರ್ಮ ಜ್ನ್ಯಾನವನ್ನು ನೀಡಲಾಗುತ್ತಿತ್ತು . ಇಂದಿನ ಕಾಲದ ದುರ್ಬಲ ಶಿಕ್ಷಣ ವ್ಯವಸ್ಥೆಯು ನಮ್ಮಲ್ಲಿ, ನಮ್ಮ ಮಕ್ಕಳಲ್ಲಿ ಧರ್ಮಶಿಕ್ಷಣ, ಸಾಧನೆ, ಸಂಸ್ಕಾರವನ್ನು ನೀಡುತ್ತಿಲ್ಲ. ಯೋಗ್ಯ ದಿಶೆಯಲ್ಲಿ ನಮ್ಮ ಜೀವನದ ಸಾರ್ಥಕವನ್ನು ಮಾಡಿಕೊಳ್ಳಲು ನಾವು ಧರ್ಮಶಿಕ್ಷಣ ಪಡೆದು, ಸಾಧನೆಯನ್ನು ಮಾಡಬೇಕಾಗಿದೆ ಎಂದು ಸನಾತನ ಸಂಸ್ಥೆಯ ಧರ್ಮಪ್ರಚಾರಕ ಸಂತರಾದ ಶ್ರೀ ರಮಾನಂದ ಗೌಡ ಇವರು ಉಪಸ್ಥಿತರಿಗೆ ಮಾರ್ಗದರ್ಶನವನ್ನು ಮಾಡಿದರು.

ಈ ಕಾರ್ಯಕ್ರಮದಲ್ಲಿ ವಕೀಲರು, ವೈದ್ಯರುಗಳು, ಉಧ್ಯಮಿಗಳು, ಕೃಷಿಕರು, ಉದ್ಯೋಗಿಗಳು, ಸಂಘಟನಾ ಪ್ರಮುಖರು ಹೀಗೆ ಸುಮಾರು ನೂರು ಜನರು ಇದರ ಲಾಭವನ್ನು ಪಡೆದುಕೊಂಡರು.

Leave a Reply

Your email address will not be published. Required fields are marked *