Wed. Aug 6th, 2025

Kadaba: ಕಡಬ ಪೇಟೆಯಲ್ಲಿ ಆರ್.ಎ.ಎಫ್ ಪಡೆಯಿಂದ ಪಥ ಸಂಚಲನ

ಕಡಬ:(ಆ.6) ದಕ್ಷಿಣ ಕನ್ನಡ ಜಿಲ್ಲೆಯ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ, ಕಡಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ಆರ್‌ಎಎಫ್ (ರ್ಯಾಪಿಡ್ ಆಕ್ಷನ್ ಫೋರ್ಸ್) ಪಡೆಯಿಂದ ಪಥಸಂಚಲನ ನಡೆಸಲಾಯಿತು.

ಇದನ್ನೂ ಓದಿ: 💐💐ಉಜಿರೆ: ಅನುಗ್ರಹ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆ

ಪಥಸಂಚಲನವು ಕಡಬ ಅನುಗ್ರಹ ಸಭಾಭವನದ ಸಮೀಪದಿಂದ ಪ್ರಾರಂಭವಾಗಿ, ಪೇಟೆಯ ಮುಖಾಂತರ ಸಾಗಿದ್ದು, ಸೈಂಟ್ ಜೋಕಿಂ ಚರ್ಚ್ ವರೆಗೆ ನಡೆಯಿತು. ಸಾರ್ವಜನಿಕರಲ್ಲಿ ಭದ್ರತೆ ಹಾಗೂ ವಿಶ್ವಾಸ ಮೂಡಿಸುವ ಉದ್ದೇಶದಿಂದ ಪಥ ಸಂಚಲನ ನಡೆಯಿತು.


ಈ ಸಂದರ್ಭದಲ್ಲಿ ಆರ್.ಎ.ಎಫ್ ಡಿ.ವೈ.ಎಸ್.ಪಿ. ಅನಿಲ್ ಜಾದವ್, ಇನ್ಸ್ಪೆಕ್ಟರ್ ಜಿ ಮನೋಹರನ್ ಕಡಬ ಠಾಣಾಧಿಕಾರಿ ಅಭಿನಂದನ್ ಎಂಎಸ್, ಅಕ್ಷಯ್ ಡವಗಿ ಮತ್ತು ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *