ಉಜಿರೆ:(ಆ.6) ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಬೆಳ್ತಂಗಡಿ, ಇವರ ವತಿಯಿಂದ ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆ ಮಡಂತ್ಯಾರು ಇದರ ಒಳಾಂಗಣ ಕ್ರೀಡಾಂಗಣದಲ್ಲಿ ಬೆಳ್ತಂಗಡಿ ತಾಲೂಕು ಮಟ್ಟದ ಶಟಲ್ ಪಂದ್ಯಾಟದಲ್ಲಿ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆ, ಉಜಿರೆ ಇಲ್ಲಿನ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಗಳಿಸಿರುತ್ತಾರೆ.

8ನೇ ತರಗತಿಯ ಇಸಾಮ್, 9ನೇ ತರಗತಿಯ ಪ್ರತೀಕ್, ಹರ್ಷಿಲ್ ಇವರು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ದೈಹಿಕ ಶಿಕ್ಷಕರಾದ ವಸಂತ ಹೆಗ್ಡೆ ಇವರು ತರಬೇತಿ ನೀಡಿರುತ್ತಾರೆ.ಅವರಿಗೆ ಶಾಲಾ ಆಡಳಿತ ಮಂಡಳಿ, ಸಂಚಾಲಕರು ಪ್ರಾಂಶುಪಾಲರು ಹಾಗೂ ಅಧ್ಯಾಪಕ ವೃಂದದ ಪರವಾಗಿ ತುಂಬು ಹೃದಯದ ಅಭಿನಂದನೆಗಳು.


