Thu. Aug 7th, 2025

Bengaluru: ಬಾಲಕನ ಕಿಡ್ನ್ಯಾಪ್, ಕೊಲೆ ಕೇಸ್​ – ಕೊನೆಗೂ ರಿವೀಲ್​ ಆಯ್ತು ಹತ್ಯೆ ರಹಸ್ಯ!

ಬೆಂಗಳೂರು, (ಆ.07): ನಿಶ್ಚಿತ್ ಎಂಬ ಬಾಲಕನ ಅಪಹರಿಸಿ ಬನ್ನೇರುಘಟ್ಟ ಸಮೀಪ ಕೊಲೆ ಮಾಡಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ ಪ್ರಕರಣದಲ್ಲಿ ಈಗಾಗಲೇ ಇಬ್ಬರ ಬಂಧನವಾಗಿದೆ. ಇದೀಗ ಬಾಲಕನ‌‌ ಕಿಡ್ನ್ಯಾಪ್ ಮತ್ತು ಕೊಲೆಯ ಕಾರಣ ರಿವೀಲ್​ ಆಗಿದೆ. ಪೊಲೀಸರ ತನಿಖೆ ವೇಳೆ ಆರೋಪಿ ಗುರುಮೂರ್ತಿಯ ಸೈಕೋ ಮನಸ್ಥಿತಿ ಗೊತ್ತಾಗಿದೆ. ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಹಾಗೆ ಬಿಟ್ಟರೆ ಮನೆಯವರಿಗೆ ವಿಷಯ ತಿಳಿಸುತ್ತಾನೆಂದು ಕೊಲೆ ಮಾಡಲಾಗಿದೆ.

ಇದನ್ನೂ ಓದಿ: 🟠ಉಜಿರೆ: ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕನಿಷ್ಠ ಆಕ್ರಮಣಕಾರಿ ಸ್ಪೈನ್ ಸರ್ಜರಿ

ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಸೈಕೋ ಮನಸ್ಥಿತಿಯ ಆರೋಪಿ ಗುರುಮೂರ್ತಿ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಬಾಲಕ ವಿರೋಧ ವ್ಯಕ್ತಪಡಿಸಿದಕ್ಕೆ ಗಂಟಲಿಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿ ಮೃತದೇಹ ಸುಟ್ಟು ಹಾಕಿದ್ದ. ಬಳಿಕ ಕೊಲೆ ವಿಷಯ ಮರೆಮಾಚಲು ಕಿಡ್ನಾಪ್ ಕಥೆ ಕಟ್ಟಿದ್ದು, ಬಾಲಕನ ಮನೆಯವರಿಗೆ ಕರೆ ಮಾಡಿ 5 ಲಕ್ಷ ರೂ. ಗೆ ಡಿಮ್ಯಾಂಡ್​ ಮಾಡಿದ್ದ.

ಇನ್ನು ಈತ 13 ವರ್ಷದ ಬಾಲಕಿಯನ್ನು ಬಿಟ್ಟಿರಲಿಲ್ಲ. ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದ. 2020 ರಲ್ಲಿಯೂ ಆರೋಪಿ ಮೇಲೆ ಪೋಕ್ಸೊ ಕೇಸ್ ದಾಖಲಾಗಿತ್ತು. ಕೋಣನಕುಂಟೆ ಪೊಲೀಸರಿಂದ ಬಂಧನಕ್ಕೆ ಒಳಗಾಗಿ, ಬಳಿಕ ಬೇಲ್ ಮೇಲೆ ಹೊರಬಂದಿದ್ದ.

ಈಗ ನಿಶ್ಚಿತ್​ ಮೇಲೆ ಕೂಡ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಮಾಡಿದ್ದ. ಇತ್ತೀಚೆಗೆ ಹುಳಿಮಾವು ಪೊಲೀಸರು ಆರೋಪಿಗಳಾದ ಗುರುಮೂರ್ತಿ ಮತ್ತು ವೇಣುಗೋಪಾಲ್​ಗೆ ಗುಂಡು ಹಾರಿಸಿ ಬಂಧಿಸಿದ್ದರು. ಸದ್ಯ ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆ ಹಿನ್ನಲೆ
ಬೆಂಗಳೂರಿನ ಅರಕೆರೆ ವೈಶ್ಯ ಬ್ಯಾಂಕ್ ಕಾಲೋನಿ ನಿವಾಸಿಯಾಗಿದ್ದ ಅಚ್ಯುತ್ ರೆಡ್ಡಿ ಮತ್ತು ಸವಿತಾ ಅವರ ಒಬ್ಬನೇ ಮಗ ಈ ನಿಶ್ಚಿತ್. ಅಚ್ಯುತ್ ರೆಡ್ಡಿ ಕಾಲೇಜೊಂದರಲ್ಲಿ ಪ್ರಾಧ್ಯಾಪಕ, ತಾಯಿ ಸವಿತಾ ಸಾಫ್ಟವೇರ್ ಎಂಜಿನಿಯರ್. ಮಗನ ಭವಿಷ್ಯದ ಬಗ್ಗೆ ಸಾಕಷ್ಟು ಕನಸು ಕಂಡಿದ್ದ ಪೋಷಕರಿಗೆ ಬರ ಸಿಡಿಲೇ ಬಂದೆರಗಿದಂತಗಾಗಿತ್ತು. ನಿಶ್ಚಿತ್​ನನ್ನ ಬನ್ನೇರುಘಟ್ಟದ ಕಗ್ಗಲೀಪುರ ರಸ್ತೆಯ ನಿರ್ಜನ ಪ್ರದೇಶವೊಂದರಲ್ಲಿ ಬರ್ಬರವಾಗಿ ಹತ್ಯೆಗೈಯಲಾಗಿತ್ತು.

ನಿಶ್ಚಿತ್​ನನ್ನ ಕೊಂದಿದ್ದು ಬೇರಾರೂ ಅಚ್ಯುತ್ ರೆಡ್ಡಿ ಮನೆಯಲ್ಲಿ ಸ್ಪೇರ್​ ಡ್ರೈವರ್​ ಆಗಿ ಕೆಲಸ ಮಾಡಿಕೊಂಡಿದ್ದ ಗುರುಮೂರ್ತಿ ಮತ್ತು ಅವನ ಸ್ನೇಹಿತ ಗೋಪಾಲಕೃಷ್ಣ. ಸ್ಪೇರ್​ ಡ್ರೈವರ್ ಆಗಿದ್ರಿಂದ ಅಚ್ಯುತ್ ರೆಡ್ಡಿ ನಿವಾಸಕ್ಕೆ ಆಗಾಗ ಬಂದು ಹೋಗ್ತಿದ್ದ ಗುರುಮೂರ್ತಿ. ಹೀಗಾಗಿ ಬಾಲಕ ನಿಶ್ಚಿತ್​ಗೆ ಗುರುಮೂರ್ತಿ ಪರಿಚಯ ಇತ್ತು. ಬುಧವಾರ ಸಂಜೆ ಟ್ಯೂಶನ್​ಗೆ ಹೋಗಿದ್ದ ನಿಶ್ಚಿತ್​ನನ್ನು ಪಾನಿಪುರಿ ಕೊಡಿಸೋದಾಗಿ ಹೇಳಿ ಕರೆದೊಯ್ದಿದ್ದಾನೆ. ಕಗ್ಗಲೀಪುರ ರಸ್ತೆಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕೊಲೆ ಮಾಡಲಾಗಿತ್ತು.

Leave a Reply

Your email address will not be published. Required fields are marked *