Fri. Aug 8th, 2025

Mangaluru: ಮಂಗಳೂರಿನಲ್ಲಿ ಎಬಿವಿಪಿ ಸುದ್ದಿಗೋಷ್ಠಿ – ಮೈಸೂರಿನಲ್ಲಿ ಡ್ರಗ್ಸ್ ಫ್ಯಾಕ್ಟರಿ ಪತ್ತೆ, ಸರ್ಕಾರದ ವೈಫಲ್ಯ ಖಂಡಿಸಿ ಹಾಗೂ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು `ಮೈಸೂರ್ ಚಲೋ’

ಮಂಗಳೂರು:(ಆ.೮) ಇಂದು ಮಂಗಳೂರಿನ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯನ್ನ ಉದ್ದೇಶಿಸಿ ಮಾತನಾಡಿದ ಎಬಿವಿಪಿ ಮಂಗಳೂರು ವಿಭಾಗ ಸಂಚಾಲಕ್ ಸುವಿತ್ ಶೆಟ್ಟಿ ನಮ್ಮ ಸಾಂಸ್ಕೃತಿಕ ನಗರಿ ಮೈಸೂರು, ಇತ್ತೀಚೆಗೆ ಮಾದಕ ವ್ಯಸನ ಮತ್ತು ಡ್ರಗ್ಸ್ ಜಾಲದ ಕೇಂದ್ರವಾಗಿ ಮಾರ್ಪಟ್ಟಿರುವುದು ತೀವ್ರ ಆತಂಕಕಾರಿಯಾಗಿದೆ. ಮಹಾರಾಷ್ಟ್ರ ಪೊಲೀಸರು ಮೈಸೂರಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಡ್ರಗ್ಸ್ ತಯಾರಿಕಾ ಘಟಕವನ್ನು ಪತ್ತೆ ಹಚ್ಚಿರುವುದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಕಾನೂನು ಸುವ್ಯವಸ್ಥೆ ಮತ್ತು ಗುಪ್ತಚರ ಇಲಾಖೆಯ ಕಾರ್ಯಕ್ಷಮತೆಯ ಮೇಲೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ವೈಫಲ್ಯವನ್ನು ಖಂಡಿಸಿ ಮತ್ತು ಮೈಸೂರು ಹಾಗೂ ಕರ್ನಾಟಕವನ್ನು ಮಾದಕವನ್ನು ಮುಕ್ತ ರಾಜ್ಯವನ್ನಾಗಿ ಮಾಡುವ ಉದ್ದೇಶದಿಂದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಅಗಸ್ಟ್ 12, 2025 ರಂದು ಬೃಹತ್ “ಮೈಸೂರು ಚಲೋ ಚಳುವಳಿಯನ್ನು ಹಂಬಿಕೊಂಡಿದೆ.

ಇದನ್ನೂ ಓದಿ: ⭕ಪುತ್ತೂರು: ತೋಡಿನಲ್ಲಿ ಮಹಿಳೆಯ ಶವ ಪತ್ತೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್​

ಡ್ರಗ್ಸ್ ಜಾಲ ಸರ್ಕಾರ ಮತ್ತು ಇಲಾಖೆಗಳ ವೈಫಲ್ಯಕ್ಕೆ ಸಾಕ್ಷಿ :
ಮೈಸೂರಿನ ಹೊರವಲಯದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಡ್ರಗ್ಸ್ ಫ್ಯಾಕ್ಟರಿ ಕಾರ್ಯನಿರ್ವಹಿಸುತ್ತಿದ್ದರೂ ಸ್ಥಳೀಯ ಸರ್ಕಾರ, ಪೊಲೀಸ್ ಇಲಾಖೆ ಮತ್ತು ಗುಪ್ತಚರ ಸಂಸ್ಥೆಗಳಿಗೆ ಅದರ ಬಗ್ಗೆ ಅರಿವಿಲ್ಲದಿರುವುದು ಅತ್ಯಂತ ಬೇಜವಾಬ್ದಾರಿಯ ಸಂಗತಿಯಾಗಿದೆ.ಇದು ನಮ್ಮ ಕಾನೂನು ಪಾಲನಾ ವ್ಯವಸ್ಥೆಯ ಅಂತರವನ್ನು ಮತ್ತು ವೈಫಲ್ಯವನ್ನು ಸ್ಪಷ್ಟವಾಗಿ ತೋರಿಸುತ್ತದೆ. ವಿದೇಶಿ ಮತ್ತು ಹೊರ ರಾಜ್ಯಗಳ ಮಾಫಿಯಾಗಳು ನಮ್ಮ ಸಾಂಸ್ಕೃತಿಕ ರಾಜಧಾನಿಯಲ್ಲಿ ಅಕ್ರಮವಾಗಿ ಡ್ರಗ್ಸ್ ಉತ್ಪಾದನೆ ಮತ್ತು ಮಾರಾಟ ಮಾಡುತ್ತಿದ್ದರೂ, ರಾಜ್ಯದ ಭದ್ರತಾ ಸಂಸ್ಥೆಗಳು ಕಣ್ಮುಟ್ಟಿ ಕುಳಿತಿದ್ದವು ಈ ಘಟನೆ ಸರ್ಕಾರ ಮತ್ತು ಪೊಲೀಸ್ ಇಲಾಖೆಯ ಸಮರ್ಥತೆಯನ್ನು ಸಂಶಯದಲ್ಲಿಟ್ಟಿದೆ.

ವಿದ್ಯಾರ್ಥಿಗಳು, ಯುವಜನತೆ, ಹೆಣ್ಣುಮಕ್ಕಳು ಮತ್ತು ಸಮಾಜದ ಮೇಲಿನ ಗಂಭೀರ ಪರಿಣಾಮಗಳು :
ಮಾದಕ ವ್ಯಸನವು ಯುವಜನತೆ ಮತ್ತು ವಿದ್ಯಾರ್ಥಿಗಳ ಭವಿಷ್ಯವನ್ನು ನಾಶಪಡಿಸುತ್ತಿದೆ. ಮಾದಕ ವಸ್ತುಗಳ ಸುಲಭಲಭ್ಯತೆಯು ಅನೇಕ ವಿದ್ಯಾರ್ಥಿಗಳನ್ನು ಈ ದುಶ್ಚಟಕ್ಕೆ ಬಲಿಪಶುಗಳನ್ನಾಗಿ ಮಾಡುತ್ತಿದೆ. ಇದರ ಪರಿಣಾಮವಾಗಿ, ಅಪರಾಧ ಚಟುವಟಿಕೆಗಳು ಹೆಚ್ಚಾಗುತ್ತಿವೆ ವಿದ್ಯಾರ್ಥಿನಿಯರು ಮತ್ತು ಯುವತಿಯರು ಕೂಡ ಮಾದಕ ವ್ಯಸನಿಗಳ ದಾಳಿಗೆ ಒಳಗಾಗುತ್ತಿದ್ದು ಅವರ ಸುರಕ್ಷತೆ ಅಪಾಯದಲ್ಲಿದೆ ಡ್ರಗ್ಸ್ ಮಾಫಿಯಾ ಇಡೀ ಸಮಾಜದ ಕಾಂತಿ ನೆಮ್ಮದಿ ಮತ್ತು ಸಮಗ್ರತೆಯನ್ನು ಹಾಳುಮಾಡುತ್ತಿದೆ. ಈ ಜಾಲವು ಯುವಕರು ಮತ್ತು ಸಮಾಜವನ್ನು ಆರ್ಥಿಕವಾಗಿ, ಮಾನಸಿಕವಾಗಿ ಮತ್ತು ದೈಹಿಕವಾಗಿ ದುರ್ಬಲಗೊಳಿಸುತ್ತಿದೆ.

ಎಬಿವಿಪಿ, ಮೈಸೂರು ಚಲೋ ಚಳುವಳಿಯ ಮೂಲಕ ಸರ್ಕಾರಕ್ಕೆ ಮತ್ತು ಸಾರ್ವಜನಿಕರಿಗೆ ಒಂದು ಸ್ಪಷ್ಟ ಸಂದೇಶವನ್ನು ರವಾನಿಸಲು ಬಯಸುತ್ತದೆ. “ಮೈಸೂರು ಮತ್ತು ಕರ್ನಾಟಕ ಡ್ರಗ್ಸ್ ಮುಕ್ತವಾಗಬೇಕು”ಈ ನಿಟ್ಟಿನಲ್ಲಿ ಎಲ್ಲಾ ವಿದ್ಯಾರ್ಥಿಗಳು, ಯುವಕರು, ಪೋಷಕರು ಮತ್ತು ಸಮಾಜದ ಹಿತೈಷಿಗಳು ಈ ಹೋರಾಟದಲ್ಲಿ ನಮ್ಮೊಂದಿಗೆ ಕೈಜೋಡಿಸಿ, ಈ ಪಿಡುಗಿನ ವಿರುದ್ಧ ಧ್ವನಿ ಎತ್ತಬೇಕೆಂದು ಎಬಿವಿಪಿ ಮನವಿ ಮಾಡುತ್ತದೆ.

ಚಳುವಳಿಯ ಪ್ರಮುಖ ಬೇಡಿಕೆಗಳು:

ಮೈಸೂರಿನಲ್ಲಿ ಪತ್ತೆಯಾದ ಡ್ರಗ್ಸ್ ಫ್ಯಾಕ್ಟರಿ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಒಪ್ಪಿಸಬೇಕು.

ಕಾನೂನು ಸುವ್ಯವಸ್ಥೆ ಮತ್ತು ಗುಪ್ತಚರ ವೈಫಲ್ಯಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.

ಎನ್‌ಡಿಪಿಎಸ್ ಮತ್ತು ಕೋಪ್ಪಾ ಕಾಯ್ದೆಗಳನ್ನು ಬಲಪಡಿಸುವಲ್ಲಿ ಪ್ರಮುಖ ತಿದ್ದುಪಡಿಗಳನ್ನು ಮಾಡಬೇಕು ಹಾಗೂ ಕಟ್ಟುನಿಟ್ಟಾಗಿ ಜಾರಿಗೊಳಿಸಿ, ಡ್ರಗ್ಸ್ ಮಾಫಿಯಾವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು.

ಮಾದಕ ವ್ಯಸನಿಗಳ ಪುನರ್ವಸತಿ ಕೇಂದ್ರಗಳನ್ನು ಹೆಚ್ಚಿಸಬೇಕು ಮತ್ತು ಯುವಕರಲ್ಲಿ ಜಾಗೃತಿ ಮೂಡಿಸಲು ಪೊಲೀಸ್ ಇಲಾಖೆಯು ಶಾಲಾ-ಕಾಲೇಜು ಹಾಗೂ ವಿದ್ಯಾರ್ಥಿ ಸಂಘಟನೆಗಳ ನೆರವಿನಿಂದ ನಿರಂತರ ಅಭಿಯಾನಗಳನ್ನು ನಡೆಸಬೇಕು.

  • ಸಿವಿಲ್ ಠಾಣೆಗಳಲ್ಲಿ ದಾಖಲಾಗುವ ಡ್ರಗ್ಸ್ ಪ್ರಕರಣಗಳ ಮೇಲ್ವಿಚಾರಣೆಗೆ ಸರ್ಕಾರ ರಚಿಸಿರುವ ಎಎಸ್.ಟಿ.ಎಫ್. ತಂಡವು ಸಮರ್ಪಕವಾಗಿ ಕಾರ್ಯನಿರ್ವಹಿಸಲು ಸಂಪೂರ್ಣ ಸ್ವತಂತ್ರವನ್ನು ನೀಡಬೇಕು ಹಾಗೂ ಟಾಸ್ಕ್ ಫೋರ್ಸ್ ರಚನೆಯ ಉದ್ದೇಶದ ಸಫಲತೆಯನ್ನು ಖಚಿತಪಡಿಸಿಕೊಳ್ಳಬೇಕು.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಈಗಾಗಲೇ ಮಾದಕ ದ್ರವ ಅಥವಾ ಡ್ರಗ್ಸ್ ನಿರ್ಮೂಲನೆಗಾಗಿ ನಶೆ ಮುಕ್ತ ಕ್ಯಾಂಪಸ್ ಎನ್ನುವ ಅಭಿಯಾನದ ಅಡಿಯಲ್ಲಿ ನೂರಾರು ಜಾಗೃತಿ ಕಾರ್ಯಕ್ರಮಗಳನ್ನು ಕರ್ನಾಟಕದ್ದಂತೆ ಕಾಲೇಜು ಕ್ಯಾಂಪಸ್ ಗಳಲ್ಲಿ ಯಶಸ್ವಿಯಾಗಿ ಆಯೋಜಿಸಿದೆ. ಮುಂದುವರೆದು ಡ್ರಗ್ಸ್ ಸೇವನೆ ಸಾಮಾಜಿಕ ಪಿಡುಗು ಎಂದು ಗುರುತು ಮಾಡಿ ವಿದ್ಯಾರ್ಥಿ ಪರಿಷತ್ ರಾಜ್ಯದ ಪ್ರತಿ ಕಾಲೇಜು ಕ್ಯಾಂಪಸ್ ಗಳಲ್ಲಿ ಡ್ರಗ್ಸ್ ವಿರೋಧಿ ಅರಿವು ಕಾರ್ಯಕ್ರಮಗಳನ್ನು ಆಯೋಜಿಸಲಿದೆ. ಈ ಬೃಹತ್ ಚಳುವಳಿಯ ಯಶಸ್ವಿ ಆಯೋಜನೆಯಲ್ಲಿ ಪಾಲ್ಗೊಂಡು ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು ಸಹಕರಿಸಬೇಕೆಂದು ಎಬಿವಿಪಿ ಸಕಲರನ್ನು ಕೋರುತ್ತದೆ.

ಈ ಸುದ್ದಿಗೊಷ್ಟಿಯಲ್ಲಿ ಮಂಗಳೂರು ಜಿಲ್ಲಾ ಸಂಚಾಲಕ್ ಶ್ರೀಜಿತ್ ರೈ, ಮಹಾನಗರ ಕಾರ್ಯದರ್ಶಿ ಮೋನಿಶ್ ತುಮಿನಾಡು, ಮಹಾನಗರ ವಿಸ್ತರಕ್ ಶ್ರೀಲಕ್ಷ್ಮಿ ಶೆಟ್ಟಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *