ಪುತ್ತೂರು:(ಆ.8) ಕೆದಿಲ ಸಮೀಪ ಕಾಂತಕೋಡಿ ಎಂಬಲ್ಲಿ ತೋಡಿನಲ್ಲಿ ಮಹಿಳೆಯ ಶವ ಪತ್ತೆಯಾಗಿದ್ದು ಹಲವು ಅನುಮಾನಗಳಿಗೆ ಕಾರಣವಾಗಿತ್ತು.
ಮೃತ ಮಹಿಳೆಯನ್ನು ಕಾಂತಕೋಡಿ ನಿವಾಸಿ ರಾಮಣ್ಣ ಗೌಡ ಅವರ ಪತ್ನಿ ಮಮತಾ (35).

ಇದನ್ನೂ ಓದಿ: ⭕bengaluru: ಸ್ನೇಹಿತನ ಹೆಂಡ್ತಿಯನ್ನೇ ಹತ್ಯೆಗೈದು ವ್ಯಕ್ತಿ ಆತ್ಯಹತ್ಯೆ
ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಯಾದ ಮಹಿಳೆಯ ಪತಿಯ ಸಹೋದರನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಮೃತ ಮಮತಾ ಮಹಿಳೆಯ ಗಂಡ ಗಣಪತಿ @ರಾಮಣ್ಣಗೌಡ (44) ರವರು ನೀಡಿದ ದೂರಿನಂತೆ ತನ್ನ ಸಹೋದರನಾದ ಆರೋಪಿ ಬಂಟ್ವಾಳ ಕೆದಿಲ ನಿವಾಸಿ ಲೋಕಯ್ಯ @ ಸುಂದರ ಎಂಬಾತನು, ಆತನ ವಿವಾಹ ವಿಚ್ಚೇದನದ ಪರಿಹಾರ ಹಣದ ವಿಚಾರದಲ್ಲಿ ಮನಸ್ತಾಪ ಉಂಟಾಗಿ, ದಿನಾಂಕ 06.08.2025 ರಂದು ಬಂಟ್ವಾಳ,

ಕೆದಿಲ ಗ್ರಾಮದ ವಳಕುಮೇರು ಎಂಬಲ್ಲಿ ಕೊಲೆ ಮಾಡುವ ಉದ್ದೇಶದಿಂದ ಹಲ್ಲೆ ನಡೆಸಿ, ಪ್ರಜ್ಞೆ ತಪ್ಪಿದ ನಂತರ ಹರಿಯುವ ನೀರಿಗೆ ದೂಡಿ ಹಾಕಿರುವುದರಿಂದ ಮಮತಾರವರು ಮೃತಪಟ್ಟಿರುವುದಾಗಿ ನೀಡಿದ ದೂರಿನ ಮೇರೆಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅಕ್ರ: ಅ.ಕ್ರ:69/2025 ಕಲಂ: 115(2),103(1) BNS 2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

