Sat. Aug 9th, 2025

ಕಟಪಾಡಿ: ಇಂಟರಾಕ್ಟ್ ಕ್ಲಬ್‌ನ ಪದಗ್ರಹಣ

ಕಟಪಾಡಿ:(ಆ.9) ಕಟಪಾಡಿಯ ಎಸ್ ವಿ ಕೆ/ಎಸ್ ವಿ ಎಸ್ ಆಂಗ್ಲಮಾಧ್ಯಮ ಶಾಲೆಯಲ್ಲಿ ಇಂಟರಾಕ್ಟ್ ಕ್ಲಬ್‌ನ ಪದಗ್ರಹಣವನ್ನು ರೋಟರಿ ಪೂರ್ವ ಅಸಿಸ್ಟೆಂಟ್ ಗವರ್ನರ್ ರೋ. MPHF ಕೆ ಸತ್ಯೇಂದ್ರ ಪೈ ಅನುಷ್ಠಾಪನ ಅಧಿಕಾರಿಯಾಗಿ ಭಾವಹಿಸಿ,

ಇದನ್ನೂ ಓದಿ: 💎ಬೆಳ್ತಂಗಡಿ: ಬೆಳ್ತಂಗಡಿ ಮುಳಿಯದಲ್ಲಿ ಡೈಮಂಡ್ ಉತ್ಸವಕ್ಕೆ ಚಾಲನೆ

ಇಂಟರಾಕ್ಟ್ ನ ನೂತನ ಅಧ್ಯಕ್ಷೆಯಾದ ಶಾರ್ವರಿ ಹಾಗೂ ಕಾರ್ಯದರ್ಶಿ ಗೌರವ್ ಶೆಣೈ ಮತ್ತು ತಂಡದವರಿಗೆ ತಮ್ಮ ಜವಾಬ್ದಾರಿಯನ್ನು ತಿಳಿಸುತ್ತಾ ಪತ್ಯೇತರ ಚಟುವಟಿಕೆಗಳ ಅಗತ್ಯತೆಗಳನ್ನು ತಿಳಿಸಿದರು.

ಡೈರೆಕ್ಟರ್ ಯೂತ್ ಸರ್ವಿಸ್ ರೋ. MPHF ಜಗನ್ನಾಥ ಕೋಟೆಯವರು ಇಂಟರಾಕ್ಟ್ ಕ್ಲಬ್ ನ ಮೂಲಕ ವಿದ್ಯಾರ್ಥಿಗಳು ನಡೆಸಬಹುದಾದ ವಿವಿಧ ಕಾರ್ಯಕ್ರಮಗಳ ಬಗ್ಗೆ ತಿಳಿಸುತ್ತಾ, ಪರರ ಸೇವೆ ಸ್ವಂತಕ್ಕಿಂತ ಮೇಲು ಎಂಬ ಮಾತನ್ನು ಒತ್ತಿ ಹೇಳಿದರು. ಅಧ್ಯಕ್ಷತೆ ವಹಿಸಿದ ಕಟಪಾಡಿ ರೋಟರಿ ಕ್ಲಬ್ ನ ಅಧ್ಯಕ್ಷೆ ರೋ. ಆಶಾ ಅಂಚನ್ ರವರು ನಿರ್ಗಮಿತ ಇಂಟರಾಕ್ಟ್ ಅಧ್ಯಕ್ಷ ಆದಿತ್ಯ ಭಟ್ ಹಾಗೂ

ಅವರ ತಂಡಕ್ಕೆ ಅಭಿನಂದನೆ ಸಲ್ಲಿಸಿದರು. ಈ ಕಾರ್ಯಕ್ರಮದಲ್ಲಿ ಶೈಕ್ಷಣಿಕ ಸಲಹೆಗಾರರಾದ ದೇವೇಂದ್ರ ನಾಯಕ್, ಶಾಲಾ ಮುಖ್ಯ ಶಿಕ್ಷಕಿ ಶ್ವೇತಾ ಶೆಟ್ಟಿ ಇಂಟರ್ಯಾಕ್ಟ್ ಟೀಚರ್ ಕೊ- ಆರ್ಡಿನೇಟರ್ ರೇಣುಕ ಹಾಗೂ ಶಿಕ್ಷಕರಾದ ಜಯಲಕ್ಷ್ಮೀ, ಚೈತ್ರ, ವಿದ್ಯಾ, ಜ್ಯೋತಿ, ಮನೋಜ್ ಉಪಸ್ಥಿತರಿದ್ದರು. ಇಂಟರಾಕ್ಟ್ ಸದಸ್ಯರಾದ ನಿಖಿತ ಕಾಮತ್ ನಿರ್ವಹಿಸಿದ ಕಾರ್ಯಕ್ರಮದಲ್ಲಿ ನುಶ್ರ ಫಾತಿಮಾ ಸ್ವಾಗತಿಸಿ, ಭೂಮಿಕ ವಂದಾನಾರ್ಪಣೆ ಗೈದರು.

Leave a Reply

Your email address will not be published. Required fields are marked *