Sat. Aug 9th, 2025

ಗುರುವಾಯನಕೆರೆ : ಗುರುವಾಯನಕೆರೆ ಶ್ರೀ ಪತಂಜಲಿ ಯೋಗ ಶಿಕ್ಷಣ ಶಾಖೆಯಲ್ಲಿ ರಕ್ಷಾಬಂಧನ ಆಚರಣೆ

ಗುರುವಾಯನಕೆರೆ :(ಆ. 09) ಶ್ರೀ ಪತಾಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಗುರುವಾಯನಕೆರೆ ನಮ್ಮ ಮನೆ ಶಾಖೆ ಮತ್ತು ಪಾಂಡುರಂಗ ಶಾಖೆಯ ಯೋಗ ಬಂಧುಗಳು ಸೇರಿ ಪಾಂಡುರಂಗ ನಾಗರಿಕ ಸೇವಾ ಪ್ರತಿಷ್ಠಾನದಲ್ಲಿ ರಕ್ಷಾಬಂಧನ ಕಾರ್ಯಕ್ರಮವನ್ನು ಆ. 09ರಂದು ಆಚರಿಸಿದರು.

ಇದನ್ನೂ ಓದಿ: 💐ಕನ್ಯಾಡಿ: ಕೆ. ವಿನಾಯಕ ರಾವ್ ರವರಿಗೆ IOA ಸುವರ್ಣ ಸಾಧಕ ಪ್ರಶಸ್ತಿ

ನಮ್ಮ ಮನೆ ಶಾಖೆಯ ಶಿಕ್ಷಕರಾದ ಶ್ರೀಯುತ ಶಿವಕುಮಾರ್ ರವರು ಅಣ್ಣ – ತಂಗಿಯರ ಬಾಂಧವ್ಯವನ್ನು ಪೌರಾಣಿಕವಾಗಿ ನಡೆದ ಘಟನೆಗಳ ಕಥೆಗಳ ಮೂಲಕ ಸ ವಿಸ್ತಾರ ವಾಗಿ ತಿಳಿಸುವುದರೊಂದಿಗೆ ರಕ್ಷಾಬಂಧನದ ಮಹತ್ವದ ಬಗ್ಗೆ ಮಾಹಿತಿಯನ್ನು ನೀಡಿ ಎಲ್ಲಾ ಅಣ್ಣ ಅಕ್ಕಂದಿರಿಗೆ ರಕ್ಷಾಬಂಧನದ ಶುಭಾಶಯಗಳನ್ನು ಕೋರಿದರು.


ಪಾಂಡುರಂಗಶಾಖೆಯ ಶಿಕ್ಷಕರಾದ ದಯಾನಂದರವರು ಕಾರ್ಯಕ್ರಮ ವನ್ನು ನಿರೂಪಿಸಿದರು. ಎಲ್ಲಾ ಅಣ್ಣಂದಿರು ಹಾಗೂ ಅಕ್ಕಂದಿರು ಹರ್ಷೋಲ್ಲಾಸದಿಂದ ಪರಸ್ಪರ ರಕ್ಷಾಬಂಧನವನ್ನು ಕಟ್ಟುತ್ತಾ ಸಿಹಿ ತಿಂಡಿಯನ್ನು ಹಂಚುತ್ತಾ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಿದರು.
ಎರಡು ಶಾಖೆಯಿಂದ ಸುಮಾರು 75 ಯೋಗ ಬಂಧುಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *