Sat. Aug 9th, 2025

ಬೆಳ್ತಂಗಡಿ: ಗೇರುಕಟ್ಟೆ ಪತಂಜಲಿ ಯೋಗ ಶಾಖೆಯಲ್ಲಿ ರಕ್ಷಾಬಂಧನ ಆಚರಣೆ

ಬೆಳ್ತಂಗಡಿ:(ಆ.9) ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ) ಕರ್ನಾಟಕ, ಕೇಂದ್ರ ಕಚೇರಿ ತುಮಕೂರು ನೇತ್ರಾವತಿ ವಲಯ ಪುತ್ತೂರು ಇದರ ಕ್ಷೀರಸಂಗಮ ಸಭಾ ಭವನ ಕಳಿಯ ಗೇರುಕಟ್ಟೆ ಶಾಖೆಯಲ್ಲಿ 180 ನೇ ದಿನದ ಯೋಗದ ನಿತ್ಯ ಪ್ರಾತ್ಯಕ್ಷಿಕೆಯೊಂದಿಗೆ ರಕ್ಷಾ ಬಂಧನ ಕಾರ್ಯಕ್ರಮವನ್ನು ಆಚರಿಸಲಾಯಿತು.

ಇದನ್ನೂ ಓದಿ: 🛑ಬೆಳ್ತಂಗಡಿ: ಲಾಯಿಲ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಸುಗಂಧಿ ಜಗನ್ನಾಥ್ ರವರ ಮನೆ ಕುಸಿತ

ಕೇಂದ್ರದ ಮುಖ್ಯ ಶಿಕ್ಷಕಿ ಪ್ರೇಮಲತಾ ಗಣೇಶ್ ರಕ್ಷಾಬಂಧನದ ಪೌರಾಣಿಕ ಮತ್ತು ಐತಿಹಾಸಿಕ ಹಿನ್ನೆಲೆಯನ್ನು ವಿವರಿಸಿ ಭಾರತ ದೇಶ ಮತ್ತು ಸನಾತನ ಧರ್ಮದ ರಕ್ಷಣೆಗೆ ನಾವೆಲ್ಲರೂ ಮಹತ್ವವನ್ನು ನೀಡಿ ಕಂಕಣ ಬದ್ಧರಾಗುವ ಮೂಲಕ ಭಾರತದ ಸಂಸ್ಕೃತಿ ಮತ್ತು ಗೌರವವನ್ನು ಎತ್ತಿ ಹಿಡಿಯಬೇಕೆಂದರು.

ಕೇಂದ್ರದ ಸಹ ಶಿಕ್ಷಕ ಸುಕೇಶ,ಸತೀಶ ನಾಳ,ಶಿವಣ್ಣಆಚಾರ್ಯ, ಕೇಂದ್ರದ ಸಂಚಾಲಕರಾದ ವಿಜಯ,ದಿವಾಕರ ಆಚಾರ್ಯ,ಮಧುಕರ, ರಮೇಶ,ಅಶೋಕ ಆಚಾರ್ಯ,ವಸಂತ ಆಚಾರ್ಯ,ಗಣೇಶ,ಶುಭಮಂಗಳ,ಪದ್ಮಲತಾ,ಭಾರತಿ,ಧರಿತ್ರಿ ಭಾಗವಹಿಸಿ ಪರಸ್ಪರ ರಕ್ಷಾಬಂಧನವನ್ನು ಮಾಡಿ ಶುಭ ಹಾರೈಸಿದರು.

Leave a Reply

Your email address will not be published. Required fields are marked *