ಬೆಳ್ತಂಗಡಿ: (ಆ.11) ರಾಜ ಕೇಸರಿ ಸೇವಾ ಟ್ರಸ್ಟ್ (ರಿ.) ಬೆಳ್ತಂಗಡಿ ತಾಲೂಕು ಇದರ ವತಿಯಿಂದ ರಾಜ ಕೇಸರಿ ಸೇವಾ ಟ್ರಸ್ಟ್ (ರಿ.) ಕರ್ನಾಟಕ ಇದರ ಸಂಸ್ಥಾಪಕರಾದ ದೀಪಕ್ ಜಿ ಬೆಳ್ತಂಗಡಿ ಇವರ ನೇತೃತ್ವದಲ್ಲಿ 577 ನೇ ಸೇವಾ ಯೋಜನೆ ರಕ್ಷಾ ಬಂಧನ ಕಾರ್ಯಕ್ರಮವು ರೆಂಕೆದಗುತ್ತು ಕುತ್ತ್ಯಾರು ಹೊಸ ಮನೆ ಕ್ಷೇತ್ರ ವಠಾರದಲ್ಲಿ ನಡೆಯಿತು.

ಇದನ್ನೂ ಓದಿ: 🔴ಉಜಿರೆ: ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆ ವಿದ್ಯಾರ್ಥಿಗಳಿಗೆ ಬಹುಮಾನ
ಹಿಂದೂ ಜನಜಾಗೃತಿ ಸಮಿತಿ ದಕ್ಷಿಣ ಕರ್ನಾಟಕದ ಸಮನ್ವಯಕರಾದ ಚಂದ್ರ ಮೊಗವೀರ ಪ್ರಧಾನ ನುಡಿಗಳನ್ನಾಡಿದರು. ಮುಖ್ಯ ಅತಿಥಿಗಳಾಗಿ ರಾಜ ಕೇಸರಿ ಸೇವಾ ಟ್ರಸ್ಟ್ (ರಿ.) ಬೆಳ್ತಂಗಡಿಯ ಅಧ್ಯಕ್ಷರಾದ ಸತೀಶ್ ಕಂಗಿತ್ತಿಲ್ಲ ಭಾಗವಹಿಸಿದ್ದರು.

ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಖ್ಯಾತ ಚಲನಚಿತ್ರ ನಟಿ ಸಿಂಚನ ಪಿ ರಾವ್, ಖ್ಯಾತ ತುಳು ಚಲನಚಿತ್ರ ವಿಲನ್ ಪಾತ್ರಧಾರಿ ಕಲಾ ಮಾಣಿಕ್ಯ ರಾಜೇಶ್ ಕಣ್ಣೂರು, ಖ್ಯಾತ ನಿರೂಪಕರಾದ ದೀಕ್ಷಿತ್ ಗಾಣಿಗ , ಎಸಿ ಕ್ರಿಯೇಷನ್ ಸಂಸ್ಥೆಯ ಮಾಲಕ, ಚಲನಚಿತ್ರ, ಶಾರ್ಟ್ ಫಿಲಂ, ಆಲ್ಬಮ್ ಸಾಂಗ್ ಹಾಗೂ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುವ ಮನು ಸುಮನ್ ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ರಾಜ ಕೇಸರಿ ಸಂಘಟನೆ ಬೆಳ್ತಂಗಡಿ ತಾಲೂಕಿನ ಪದಾಧಿಕಾರಿಗಳು ಮತ್ತು ಸದಸ್ಯರುಗಳಾದ ಸಂತೋಷ್, ಶರತ್, ಸಂದೇಶ್, ವಿನೋದ್, ಕಿಶನ್, ಪ್ರವೀಣ್ ಆಚಾರ್ಯ, ಲೋಹಿತ್, ಪ್ರೇಮ್ ರಾಜ್, ರೋಷನ್ ಮತ್ತು ಊರ ಹಿತೈಷಿಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಸಂದೀಪ್ ಬೆಳ್ತಂಗಡಿ , ಸ್ವಾಗತವನ್ನು ಜಗದೀಶ್ ಲಾಯಿಲ, ಧನ್ಯವಾದವನ್ನು ದೇವರಾಜ್ ಪೂಜಾರಿ ಇವರು ನಿರ್ವಹಿಸಿದರು.
