ಪಡಂಗಡಿ :(ಆ.12) ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ವತಿಯಿಂದ ಪಕ್ಷ ಸಂಘಟನಾ ದೃಷ್ಟಿಯಿಂದ ನಡೆದ ಪಡoಗಡಿ ಮತ್ತು ಗರ್ಡಾಡಿ ಶಕ್ತಿ ಕೇಂದ್ರ ಪಂಚಾಯತ್ ಮಟ್ಟದ ಸಭೆ ಪಡಂಗಡಿ ಸಿ ಎ ಬ್ಯಾಂಕ್ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಹಿರಿಯ ಕಾರ್ಯಕರ್ತರಾದ ಅಣ್ಣಿಮೂಲ್ಯ ಕಾಜಿನಡ್ಕ ಉದ್ಘಾಟಿಸಿದರು.

ಇದನ್ನೂ ಓದಿ: ⭕ಚಾರ್ಮಾಡಿ: ಚಾರ್ಮಾಡಿ ಘಾಟ್‌ನಲ್ಲಿ ಬಿದ್ದು ಯುವಕ ಗಂಭೀರ
ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿಯವರು ಉದ್ಘಾಟನ ಭಾಷಣ ಮಾಡಿದರು. ಶಾಸಕರಾದ ಹರೀಶ್ ಪೂಂಜರವರು ಪಾಲ್ಗೊಂಡು ಕಾರ್ಯಕರ್ತರೊಂದಿಗೆ ಪಕ್ಷ ಸಂಘಟನೆ ಮತ್ತು ಕಾರ್ಯಚಟುವಟಿಕೆಯ ಕುರಿತು ವಿಸ್ತೃತವಾಗಿ ಸಮಾಲೋಚನೆ ನಡೆಸಿದರು.
ಈ ಸಂದರ್ಭದಲ್ಲಿ ವೇಣೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಉಮೇಶ್ ನಡ್ತಿಕಲ್ಲು, ಮಂಡಲ ಉಪಾಧ್ಯಕ್ಷರು ಮೋಹನ್ ಅಂಡಿಂಜೆ, ಜಿಲ್ಲಾ ಕಾರ್ಯದರ್ಶಿ ಸೀತಾರಾಮ್ ಬೆಳಾಲು, ಅಳದಂಗಡಿ ಮಹಾಶಕ್ತಿ ಕೇಂದ್ರ ಕಾರ್ಯದರ್ಶಿ ಮಾಧವ ಶಿರ್ಲಾಲು ಬೈಠಕ್ ನೀಡಿದರು. ಪಡoಗಡಿ ಪಂಚಾಯತ್ ಅಧ್ಯಕ್ಷರಾದ ಪ್ರಶಾಂತ್ ಸುವರ್ಣ, ಗರ್ಡಾಡಿ ಶಕ್ತಿ ಕೇಂದ್ರ ಪ್ರಮುಖರಾದ ದಿನಕರ ಕುಲಾಲ್, ಪಡoಗಡಿ ಶಕ್ತಿ ಕೇಂದ್ರ ಪ್ರಮುಖರಾದ ಅಶ್ವಿತ್ ಓಡೀಲು, ಪ್ರಭಾರಿ ಜನಾರ್ದನ ಕುಕ್ಕೆಡಿ, ಜನಪ್ರತಿನಿಧಿಗಳು ಹಾಗೂ ಅನ್ಯ ಜವಾಬ್ದಾರಿಯ ಪಕ್ಷದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.


