ಬಂಟ್ವಾಳ :(ಆ.12) ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದಿಂದ ಬಂಟ್ವಾಳ ತಾಲೂಕಿನ ನರಹರಿ ಪರ್ವತ ಸದಾಶಿವ ದೇವಸ್ಥಾನ ಜೀರ್ಣೋದ್ಧಾರ ಕಾರ್ಯಕ್ಕೆ 5 ಲಕ್ಷ ರೂಪಾಯಿ ಮಂಜುರಾಗಿದ್ದು, ಸೋಮವಾರ ನರಹರಿ ಪರ್ವತ ಸದಾಶಿವ ದೇವಸ್ಥಾನ ದ ಜೀರ್ಣೋದ್ಧರ ಸಮಿತಿಗೆ ಹಸ್ತಾಂತರ ಮಾಡಲಾಯಿತು.

ಸಹಾಯಧನ ಹಸ್ತಾಂತರ ಮಾಡಿ ಮಾತನಾಡಿದ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಬಾಬು ನಾಯ್ಕ ಧರ್ಮಸ್ಥಳದಿಂದ ಎಲ್ಲಾ ಕ್ಷೇತ್ರಗಳಿಗೂ ಸಹಾಯಧನ ನೀಡಲಾಗುತ್ತಿದ್ದು ಅದರಂತೆ ನರಹರಿ ಪರ್ವತಕ್ಕೂ ದೊಡ್ಡ ಮೊತ್ತದ ಸಹಾಯದನ ನೀಡಿದ್ದು ನರಹರಿ ಪರ್ವತದ ಜೀರ್ಣೋದರ ಸಮಿತಿಯು ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಪ್ರಸಾದ ರೂಪದಲ್ಲಿ ದೊರೆತಂತ ಸಹಾಯಧನವನ್ನು ಒಗ್ಗಟ್ಟಿನಿಂದ ಪಾರದರ್ಶಕವಾಗಿ ಸದ್ಬಳಕೆ ಮಾಡಿ ಎಂದರು.
ಈ ಸಂದರ್ಭದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ವಿಟ್ಲ ತಾಲೂಕು ಯೋಜನಾಧಿಕಾರಿ ಸುರೇಶ್ ಗೌಡ, ಕಲ್ಲಡ್ಕ ವಲಯ ಮೇಲ್ವಿಚಾರಕ ಸುಕರಾಜ್, ವಿಟ್ಲ ತಾಲೂಕು ಭಜನಾ ಪರಿಷತ್ ಕೋಶಾಧಿಕಾರಿ ಜಯರಾಮ್ ರೈ, ಯೋಜನೆಯ ಕಲ್ಲಡ್ಕ ವಲಯ ಅಧ್ಯಕ್ಷ ತುಳಸಿ, ಮಾಣಿ ಉಳ್ಳಾಲ್ಟಿ ದೇವಸ್ಥಾನದ ಪರಿಚಯಾರಕರಾದ ಶೇಖರ ಪೂಜಾರಿ, ನರಹರಿ ಪರ್ವತ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಡಾಕ್ಟರ್ ಆತ್ಮ ರಂಜನ್ ರೈ, ದೇವಸ್ಥಾನದ ಪ್ರಧಾನ ಅರ್ಚಕರಾದ ಪರಮೇಶ್ವರ ಮಯ್ಯ,

ನರಹರಿ ಪರ್ವತ ದೇವಸ್ಥಾನದ ದೇವಸ್ಥಾನ ವ್ಯವಸ್ಥಾಪನ ಸಮಿತಿಯ ಸದಸ್ಯರುಗಳಾದ ಎಂ ಎನ್ ಕುಮಾರ್, ಕೃಷ್ಣ ನಾಯಕ್, ಮಾಧವ ಶೆಣೈ, ಪ್ರತಿಭಾ ಏ ರೈ, ಶ್ರೀಧರ ಶೆಟ್ಟಿ ಬೊಂಡಲ,, ಜಿರ್ನೋಥರ ಸಮಿತಿಯ ಸದಸ್ಯರಾದ ಶಂಕರ ಆಚಾರ್ಯ, ಕಿಶೋರ್, ಶಂಕರ ಐತಾಳ್, ಸತೀಶ್ ಪಿ ಸಾಲಿಯಾನ್,ಓಂ ಪ್ರಕಾಶ್, ಬೋಳಂತೂರು ಒಕ್ಕೂಟ ಅಧ್ಯಕ್ಷ ಸೀತ,ಕಲ್ಲಡ್ಕ ಶೌರ್ಯ ವಿಪತ್ತು ಘಟಕ ಅಧ್ಯಕ್ಷ ಮಾಧವ ಸಾಲಿಯಾನ್, ಸಂಯೋಜಕಿ ವಿದ್ಯಾ ಸದಸ್ಯರುಗಳಾದ ಗಣೇಶ್ ನೆಟ್ಲಾ, ರಮೇಶ್ ಕುದ್ರೆಬೆಟ್ಟು, ಚಿನ್ನಾ ಕಲ್ಲಡ್ಕ, ರವಿಚಂದ್ರ, ಧನಂಜಯ, ಸಂತೋಷ್, ಮೊದಲಾದವರು ಉಪಸ್ಥಿತರಿದ್ದರು.

