ಇಂದಬೆಟ್ಟು: (ಆ.13) ಗ್ರಾಮ ಪಂಚಾಯತ್ ಇಂದಬೆಟ್ಟು ಮತ್ತು ಅಂಚೆ ಇಲಾಖೆ ಪುತ್ತೂರು ವಿಭಾಗದ ವತಿಯಿಂದ 2 ದಿನಗಳ ಕಾಲ ಆಧಾರ್ ಕಾರ್ಡ್ ಪರಿಷ್ಕರಣೆ, ತಿದ್ದುಪಡಿ, ಹೊಸ ಕಾರ್ಡ್ ನೋಂದಾವಣೆ ಶಿಬಿರವು ಇಂದಬೆಟ್ಟು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಇದನ್ನೂ ಓದಿ: 🟢ಉಜಿರೆ: ಪರಭಾಷೆ ಕಲಿಕೆ ತಪ್ಪೆಂಬ ಮನೋಭಾವ ದೂರವಾಗಲಿ: ಸುನೀಲ್ ಪಂಡಿತ್
ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿಬಿರದ ಸದುಪಯೋಗವನ್ನು ಪಡೆದುಕೊಂಡರು. ಪಂಚಾಯತ್ ಅಧ್ಯಕ್ಷರು, ಸದಸ್ಯರು, ಅಭಿವೃದ್ಧಿ ಅಧಿಕಾರಿ ಕಾರ್ಯದರ್ಶಿ, ಸಿಬ್ಬಂದಿ ವರ್ಗದವರು, ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು, ಅಂಚೆ ಇಲಾಖೆ ಪುತ್ತೂರು ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದು ಸಹಕರಿಸಿದರು.


