Wed. Aug 13th, 2025

ಬಂಟ್ವಾಳ: ರಾಮ್ ಫ್ರೆಂಡ್ಸ್ (ರಿ.) ಕಟೀಲು ಸೇವಾ ತಂಡದ 6ನೇ ವರ್ಷದ ಸಂಭ್ರಮಾಚರಣೆ ಹಾಗೂ ಸಹಾಯ ಹಸ್ತ ನಿಧಿ ವಿತರಣೆ ಕಾರ್ಯಕ್ರಮ

ಬಂಟ್ವಾಳ:(ಆ.13) ರಾಮ್ ಫ್ರೆಂಡ್ಸ್ ರಿ ಕಟೀಲು ತಂಡದ 6ನೇ ವರ್ಷದ ಸಂಭ್ರಮಾಚರಣೆ ಹಾಗೂ ಸಹಾಯಧನ ವಿತರಣೆ ಕಾರ್ಯಕ್ರಮ ನಮ್ಮ ಹಿರಿಯರ ಮನೆ ಆಶ್ರಮ ಸ್ನೇಹ ಭಾರತಿ ವಿದ್ಯಾ ಸಂಸ್ಥೆ (ರಿ) ಗುಡ್ಡೆಯಂಗಡಿ ಅರಳ ಬಂಟ್ವಾಳ ತಾಲೂಕು ಇಲ್ಲಿ ಜರುಗಿತು.

ಇದನ್ನೂ ಓದಿ: ⭕ಗುರುವಾಯನಕೆರೆ: ಕಾರಿನಲ್ಲಿ ಹಿಂಸಾತ್ಮಕವಾಗಿ ಅಕ್ರಮ ಗೋ ಸಾಗಾಟ

ಕಾರ್ಯಕ್ರಮವನ್ನು ರಂಜಿತ್ ಪೂಜಾರಿ ತೋಡಾರು ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವೃದ್ಧಾಶ್ರಮಕ್ಕೆ ಅಗತ್ಯವಿರುವ 20000 ಮೌಲ್ಯದ ವಸ್ತುಗಳನ್ನು ನೀಡಲಾಯಿತು ಹಾಗೂ 2 ಅಶಕ್ತ ಕುಟುಂಬಕ್ಕೆ 20000 ಸಹಾಯಧನ ಹಸ್ತಾಂತರಿಸಲಾಯಿತು.

ನಿರಂತರ ಸಮಾಜಸೇವೆಯಲ್ಲಿ ಗುರುತಿಸಿಕೊಂಡ ಸೇವಾ ತಂಡಗಳನ್ನು ಗೌರವಿಸಲಾಯಿತು. ಪ್ರಶಾಂತ್ ಕುಮಾರ್ ಕಾನ, ವಿಕಾಸ್. ಕೆ. ಬೆಂಗಳೂರು, ರಾಮನಗೌಡ ಸಿ ಗ್ವಾತಗಿ ರಾಮ್ ಫ್ರೆಂಡ್ಸ್ (ರಿ.) ಕಟೀಲು ತಂಡದ ಸ್ಥಾಪಕಧ್ಯಕ್ಷರಾದ ರಮಾನಂದ ಪೂಜಾರಿ ಕಟೀಲು ಹಾಗೂ ತಂಡದ ಪದಾಧಿಕಾರಿಗಳು ಮತ್ತು ನಿಸ್ವಾರ್ಥ ಸೇವಾ ಬಂಧುಗಳು ಉಪಸ್ಥಿತರಿದ್ದರು. ತಂಡದ ಅಧ್ಯಕ್ಷರಾದ ಸುಮಂತ್ ಸುವರ್ಣ ಬಡಗಮಿಜಾರು ಅತಿಥಿಗಳನ್ನು ಸ್ವಾಗತಿಸಿದರು. ಕಿರಣ್ ಶೆಟ್ಟಿ ಅತ್ತೂರು ಕಾರ್ಯಕ್ರಮವನ್ನು ನಿರೂಪಿಸಿದರು.

Leave a Reply

Your email address will not be published. Required fields are marked *