ಉಜಿರೆ:(ಆ.14) ಉಜಿರೆ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಅಂಗರಿಕಾ ಸಂಕಷ್ಟಿಯ ಪ್ರಯುಕ್ತ ಯಕ್ಷ ಭಾರತಿ ರಿ. ಕನ್ಯಾಡಿ ಇವರಿಂದ ಶಲ್ಯ ಸಾರಥ್ಯ ನಿರ್ಗಮನ ತಾಳಮದ್ದಳೆ ಜರಗಿತು.

ಇದನ್ನೂ ಓದಿ: 🔴ಕುಪ್ಪೆಟ್ಟಿ : ಕುಪ್ಪೆಟ್ಟಿಯ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಗೆ ಸೌಂಡ್ ಸಿಸ್ಟಮ್ ಕೊಡುಗೆ
ಭಾಗವತರಾಗಿ ಮಹೇಶ ಕನ್ಯಾಡಿ, ಹಿಮ್ಮೇಳದಲ್ಲಿ ವಾಸುದೇವ ಆಚಾರ್ಯ ಉಜಿರೆ, ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ, ಶಿತಿಕಂಠ ಭಟ್ ಉಜಿರೆ ಅರ್ಥಧಾರಿಗಳಾಗಿ ದಿವಾಕರ ಆಚಾರ್ಯ ಗೇರುಕಟ್ಟೆ ( ಕೌರವ ) ಸುರೇಶ ಕುದ್ರಂತಾಯ(ಶಲ್ಯ ) ಹರಿದಾಸ ಗಾಂಭೀರ ಧರ್ಮಸ್ಥಳ ( ಕರ್ಣ ) ಶ್ರೀಮತಿ ಭವ್ಯ ಹೊಳ್ಳ ( ಅಶ್ವಸೇನ ) ಭಾಗವಹಿಸಿದ್ದರು.
ದೇವಳದ ಅನುವಂಶೀಯ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡ್ವೆಟ್ನಾಯ ಮತ್ತು ಕಲಾಭಿಮಾನಿಗಳು ಭಾಗವಹಿಸಿದ್ದರು. ರವೀಂದ್ರ ಶೆಟ್ಟಿ ಬಳೆಂಜ ಸ್ವಾಗತಿಸಿ ವಂದಿಸಿದರು.


