Thu. Aug 14th, 2025

ಸುಬ್ರಮಣ್ಯ: ಸಂಬಂಧಿಯಿಂದಲೇ ಗರ್ಭಿಣಿಯಾದ ಅಪ್ರಾಪ್ತೆ – ಹೆರಿಗೆ ವೇಳೆ ಸಾವನ್ನಪ್ಪಿದ ಮಗು

ಸುಬ್ರಮಣ್ಯ:(ಆ.14) ಸಂಬಂಧಿಯಿಂದಲೇ ಅಪ್ರಾಪ್ತೆ ತಾಯಿಯಾಗಿ ಹೆರಿಗೆ ವೇಳೆ ಮಗು ಸಾವನ್ನಪ್ಪಿರುವ ಘಟನೆ ಸುಬ್ರಮಣ್ಯದಲ್ಲಿ ನಡೆದಿದೆ.
ಕೊಲ್ಲಮೊಗ್ರದ ಅಪ್ರಾಪ್ತೆ ಮೇಲೆ ಆಕೆಯ ಚಿಕ್ಕಮ್ಮನ ಮಗ ಲೈಂಗಿಕ ದೌರ್ಜನ್ಯವೆಸಗಿದ್ದ.

ಇದನ್ನೂ ಓದಿ: 🟢ಉಜಿರೆ: ಉಜಿರೆ ಯಕ್ಷ ಭಾರತಿಯಿಂದ ಶಲ್ಯ ನಿರ್ಗಮನ ತಾಳಮದ್ದಳೆ

ಬಾಲಕಿಗೆ ಹೊಟ್ಟೆನೋವು ಎಂದು ಪೋಷಕರು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಗರ್ಭಿಣಿ ಅನ್ನೋದು ಗೊತ್ತಾಗಿದೆ. ಬಾಲಕಿಗೆ 9 ತಿಂಗಳು ತುಂಬಿದ ಹಿನ್ನೆಲೆ ಹೆರಿಗೆಯಾಗಿದ್ದು, ಈ ಮಗು ಆಸ್ಪತ್ರೆಯಲ್ಲಿ ಮೃತಪಟ್ಟಿದೆ ಎನ್ನಲಾಗಿದೆ. ಆರೋಪಿ ವಿರುದ್ಧ ಈಗಾಗಲೇ ಪೋಕ್ಸೋ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *