Sat. Aug 16th, 2025

ಕನ್ಯಾಡಿ: ಕನ್ಯಾಡಿ ಸರ್ಕಾರಿ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ಕನ್ಯಾಡಿ: 79ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕನ್ಯಾಡಿ 2, ಶಾಲೆಯಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಈ ಕಾರ್ಯಕ್ರಮವು ಎಸ್‌.ಡಿ.ಎಂ.ಸಿ.ಯ ಅಧ್ಯಕ್ಷರಾದ ಶ್ರೀಯುತ ಕೆ. ನಂದ ಇವರ ಉಪಸ್ಥಿತಿಯಲ್ಲಿ ನಡೆಯಿತು.

ಇದನ್ನೂ ಓದಿ: 🔴ಕುಪ್ಪೆಟ್ಟಿ: ಸ.ಉ.ಹಿ.ಪ್ರಾ.ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಮತ್ತು ನೂತನ ಶೌಚಾಲಯದ ಉದ್ಘಾಟನೆ

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀಮತಿ ಪವಿತ್ರ ಸುಕುಮಾರ ಶೆಟ್ಟಿ, ಬೃಂದಾವನ ಮನೆ ಕನ್ಯಾಡಿ 2, ಧ್ವಜಾರೋಹಣವನ್ನು ನೆರವೇರಿಸುವ ಮೂಲಕ ಸ್ವಾತಂತ್ರ್ಯ ದಿನಾಚರಣೆಯ ಶುಭ ಮಾತುಗಳನ್ನಾಡಿದರು. ಮಹಾತ್ಮ ಗಾಂಧೀಜಿ ಮತ್ತು ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಸಲ್ಲಿಸಿ ಗೌರವವನ್ನು ಸೂಚಿಸಲಾಯಿತು.

ಶಾಲಾ ನಾಯಕಿ ಕುಮಾರಿ ಅನನ್ಯ ನೇತೃತ್ವದಲ್ಲಿ ಘೋಷಣೆಯನ್ನು ಮಕ್ಕಳು ಹೇಳುವ ಮೂಲಕ ಹುತಾತ್ಮರಿಗೆ ಗೌರವವನ್ನು ಸಲ್ಲಿಸಲಾಯಿತು ಮತ್ತು ಕುಮಾರಿ ಸಂಜನಾ ಸ್ವಾತಂತ್ರ್ಯ ದಿನಾಚರಣೆಯ ಮಹತ್ವವನ್ನು ತಿಳಿಸಿದಳು. ಈ ಸಂದರ್ಭದಲ್ಲಿ ಗೌರವ ಸಲಹೆಗಾರರಾದ ಶ್ರೀ ರಾಜೇಂದ್ರ ಅಜ್ರಿ, ಶ್ರೀ ಪ್ರಭಾಕರ್ ಗೌಡ ಬೊಳ್ಮಾ , ಶ್ರೀ ಸಿ.ಜೆ.ಪ್ರಭಾಕರ್, ಶ್ರೀ ಸೂರ್ಯಪ್ರಕಾಶ್ ಎಂ , ಶ್ರೀ ನೀಲಕಂಠ ಶೆಟ್ಟಿ , ಶ್ರೀ ನವೀನ್ ಚಂದ್ರ ಶೆಟ್ಟಿ, ನಿವೃತ್ತ ಹಿರಿಯ ಶಿಕ್ಷಕಿ ಶ್ರೀಮತಿ ವನಜಾ ಕುಮಾರಿ, ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ಶ್ರೀಮತಿ ಚಂದ್ರಾವತಿ,ಪ್ರಭಾರ ಮುಖ್ಯ ಶಿಕ್ಷಕರಾದ ಶ್ರೀಮತಿ ಪುಷ್ಪಾ ಎನ್,

ಎಸ್ ಡಿ .ಎಮ್. ಸಿ ಯ ಸದಸ್ಯರು ಉಪಸ್ಥಿತರಿದ್ದರು.ಮಕ್ಕಳ ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮವು ಸಡಗರದಿಂದ ನೆರವೇರಿತು. ಈ ಸಂದರ್ಭದಲ್ಲಿ ಶಾಲಾ ಶಿಕ್ಷಕ ವೃಂದದವರು, ಪೋಷಕರು, ಶಾಲಾ ಮಕ್ಕಳು ಉಪಸ್ಥಿತರಿದ್ದರು. ಈ ಕಾರ್ಯಕ್ರಮದ ಸ್ವಾಗತವನ್ನು ಶ್ರೀಮತಿ ಪುಷ್ಪಾ ಎನ್, ಧನ್ಯವಾದ ಸಹ ಶಿಕ್ಷಕರಾದ ಶ್ರೀ ನಾಗರಾಜ್ ಮತ್ತು ಸಹ ಶಿಕ್ಷಕರಾದ ಶ್ರೀಮತಿ ದೀಪಿಕಾ ಕಾರ್ಯಕ್ರಮವನ್ನು ನಿರೂಪಿಸಿದರು. ಮಕ್ಕಳಿಗೆ ಸಿಹಿ ತಿಂಡಿ ಮತ್ತು ಮಧ್ಯಾಹ್ನದ ಊಟವನ್ನು ನೀಡುವ ಮೂಲಕ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

Leave a Reply

Your email address will not be published. Required fields are marked *