ಕುಪ್ಪೆಟ್ಟಿ: ಸ.ಉ.ಹಿ.ಪ್ರಾ.ಶಾಲೆ ಕುಪ್ಪೆಟ್ಟಿಯಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆ ಮತ್ತು ನೂತನ ಶೌಚಾಲಯದ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀಯುತ ಅಶ್ರಫ್ ರವರು ಧ್ವಜಾರೋಹಣವನ್ನು ನೆರವೇರಿಸಿದರು.

ಕಣಿಯೂರು ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಯುತ ಹರೀಶ್ ನಾಯ್ಕ ರವರು ನೂತನ ಶೌಚಾಲಯದ ಉದ್ಘಾಟನೆಯನ್ನು ಮಾಡಿದರು. ಶಾಲಾ ಮುಖ್ಯೋಪಾಧ್ಯಾಯರು, ಅಧ್ಯಾಪಕ ವೃಂದ, ಎಸ್ ಡಿ ಎಂ ಸಿ ಸದಸ್ಯರು ಪೋಷಕರು ಹಿರಿಯ ವಿದ್ಯಾರ್ಥಿಗಳು ಊರ ಮಹನೀಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು ಬಳಿಕ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀಯುತ ಅಶ್ರಫ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಯುತ ಹರೀಶ್ ನಾಯ್ಕ ರವರು ಶುಭವನ್ನು ಹಾರೈಸಿದರು.
ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ವನಿತಾ ರವರು ಎಲ್ಲರನ್ನು ಸ್ವಾಗತಿಸಿದರು. TGT ಶಿಕ್ಷಕಿ ಶ್ರೀಮತಿ ರಶ್ಮಿ ಬಿ ಯವರು ದಿನಾಚರಣೆಯ ಮಹತ್ವದ ಕುರಿತು ಭಾಷಣ ಮಾಡಿದರು. ವಿದ್ಯಾರ್ಥಿಗಳಾದ ಫಾತಿಮಾ ಶಾನಿಷ್ಮ, ಸುಂದುಸ್ ಹರ್ಲಿನ್, ಫಾತಿಮಾತ್ ಸ್ವಪ, ರಿದಾರವರು ಭಾಷಣ ಮಾಡಿದರು.


ಕಾರ್ಯಕ್ರಮದಲ್ಲಿ ಶಾಲೆಗೆ ಸೌಂಡ್ ಸಿಸ್ಟಮ್ ಅನ್ನು ಕೊಡುಗೆಯಾಗಿ ನೀಡಿದ ಶ್ರೀಯುತ ಅಶ್ರಫ್ ಮತ್ತು ಶ್ರೀಮತಿ ಶೋಭಾ , ನೂತನ ಶೌಚಾಲಯಕ್ಕೆ ಬಾಗಿಲಿನ ವ್ಯವಸ್ಥೆಯನ್ನು ಒದಗಿಸಿಕೊಟ್ಟ ಶ್ರೀಯುತ ಅಶ್ರಫ್ ಬಾಯ್ತರ್ ರವರಿಗೆ ಗೌರವಾರ್ಪನೆ ಮಾಡಲಾಯಿತು.GPT ಶಿಕ್ಷಕಿ ಶ್ರೀಮತಿ ಶಬನ ಬಾನು ರವರು ನಿರೂಪಿಸಿದ ಕಾರ್ಯಕ್ರಮದಲ್ಲಿ ಸಹ ಶಿಕ್ಷಕಿ ಶ್ರೀಮತಿ ವಿನುತಾ S ಸಾಲಿಯಾನ್ ರವರು ಧನ್ಯವಾದ ಸಮರ್ಪಿಸಿದರು.ಸಭಾ ಕಾರ್ಯಕ್ರಮದ ಬಳಿಕ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಶಿಕ್ಷಕಿಯರಾದ ಪದ್ಮಾವತಿ, ರಾಧಾಬಾಯಿ,ವನಿತಾ, ಪೂರ್ಣಿಮಾ,ಲಿಖಿತಾರವರು ಸಹಕರಿಸಿದರು.

